ಕುಮಟಾ: ನಗರದ ಡಾ.ಎ ವಿ ಬಾಳಿಗಾ ಇಂಗ್ಲಿಷ್ ಮಾಧ್ಯಮದ ಪ್ರೈಮರಿ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಿಸಲಾಯಿತು.
ಈಗಾಗಲೇ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಓನ್ ಲೈನ್ ತರಗತಿ ಮೂಲಕ ಶಿಕ್ಷಣ ನೀಡಲಾಗುತ್ತಿದ್ದು, ಇದರ ಮಧ್ಯೆ ರಾಷ್ಟ್ರೀಯ ಹಬ್ಬಗಳನ್ನು ಕೂಡ ಶೃದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ. ಶಾಲೆಯಲ್ಲಿ ಶನಿವಾರ ಗಾಂಧೀ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಎಲ್ಲ ಶಿಕ್ಷಕರು ಪುಷ್ಪ ನಮನ ಸಲ್ಲಿಸಿ ಶಾಲೆಯ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛ ಗೊಳಿಸಿದರು.
ನಂತರ ಶಾಲೆಯ ಮುಖ್ಯಾಧ್ಯಾಪಕಿ ಜ್ಯೋತಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ನಮಗೆ ಮುಖ್ಯ ಆದ್ದರಿಂದ ಓನ್ ಲೈನ್ ಮೂಲಕ ನಮಗೆ ಸಾಧ್ಯವಾದಷ್ಟು ಶ್ರಮ ವಹಿಸಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇವೆ. ಗಾಂಧೀ ಜಯಂತಿ ಬಗ್ಗೆ ಮಕ್ಕಳಲ್ಲಿ ಅರಿವು ಹೆಚ್ಚುವುದರ ಸಲುವಾಗಿ ಗಾಂಧೀಜಿಯವರ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಮೂರು ನಿಮಿಷ ಅವಧಿ ನಿಗದಿಪಡಿಸಿ ವೀಡಿಯೊ ಮಾಡಿ ಕಳುಹಿಸಲು ಸೂಚಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಲ್ಲ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.