ಕುಮಟಾ: ಶ್ರೀಕ್ಷೇತ್ರ ಯಾಣಕ್ಕೆ ಹೋಗುವ ಪ್ರವಾಸಿಗರಿಗೆ ದಾರಿ ಮಧ್ಯೆ ಮಾರ್ಗ ಸೂಚಿಸುವ ಸೂಚನಾ ಫಲಕಗಳಿಲ್ಲದೇ ದಾರಿತಪ್ಪಿ ಬೇರೆಡೆ ಪ್ರಯಾಣಿಸುತ್ತಿದ್ದು, ತಕ್ಷಣ ಸಂಬಂಧಿಸಿದ ಇಲಾಖೆ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಕರವೇ ಸ್ವಾಭಿಮಾನಿ ಬಣದ ಕತಗಾಲ ಘಟಕಾಧ್ಯಕ್ಷ ಮಾರುತಿ ಆನೇಗುಂಡಿ ಒತ್ತಾಯಿಸಿದ್ದಾರೆ.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಜಿಪಿಎಸ್ ಮೂಲಕ ಯಾಣಕ್ಕೆ ಸಾಗುವ ಮಾರ್ಗವನ್ನು ಕಂಡುಕೊಳ್ಳುತ್ತಿದ್ದು, ಕೆಲವೊಮ್ಮೆ ನೆಟ್ವರ್ಕ್ ಹಾಗೂ ಜಿಪಿಎಸ್ ಸಮಸ್ಯೆಯಿಂದ ಯಾಣಕ್ಕೆ ತೆರಳುವ ದಾರಿ ಮಾಸ್ತಿಹಳ್ಳ ಮಾರ್ಗವನ್ನು ಸೂಚಿಸುತ್ತಿದೆ. ಇದರಿಂದಾಗಿ ಪ್ರವಾಸಿಗರು ಮಾಸ್ತಿಹಳ್ಳ ಎರಡು ಕಿ.ಮೀ ಗೂ ದೂರದ ಮಾಸ್ತಿಹಳ್ಳಕ್ಕೆ ಹೋಗಿ ಯಾಣದ ಮಾರ್ಗ ಕಾಣದೆ ವಾಪಸ್ ಯಾಣದ ಮಾರ್ಗ ಹುಡುಕುತ್ತಾ ಬರುತ್ತಿದ್ದಾರೆ.
ಹೀಗಾಗಿ ಯಾಣದ ಕ್ರಾಸ್ ನಲ್ಲಿ ಶ್ರೀ ಕ್ಷೇತ್ರ ಯಾಣಕ್ಕೆ ಹೋಗುವ ದಾರಿ ಎಂದು ದೊಡ್ಡದಾಗಿ ನಾಮಫಲಕ ಹಾಕಬೇಕು, ಜೊತೆಗೆ ದಾರಿಮಧ್ಯೆ ಕೆಲವೆಡೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿಬೇಕೆಂದು ವಿನಂತಿಸಿದ್ದಾರೆ.