ಮುಂಡಗೋಡ: ಕ್ರೀಡೆಯಲ್ಲಿ ಎಷ್ಟು ಸಾಧನೆ ಮಾಡುತ್ತೇವೆಯೋ ಅಷ್ಟು ನಮ್ಮ ಊರು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿ ಹೆಚ್ಚಿಸುತ್ತದೆ. ರಾಷ್ಟ್ರ ಪ್ರೇಮವನ್ನು ಕ್ರೀಡೆಯ ಮೂಲಕವು ತೋರಿಸಬಹುದು ಎಂದು ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಪಟು ಎನ್. ಎಸ್ ಸಿಮಿ ಹೇಳಿದರು.
ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪದಕ ಪಡೆದ ಹಿನ್ನೆಲೆಯಲ್ಲಿ ಚವಡಳ್ಳಿ-ಮಲವಳ್ಳಿ ಸಹಕಾರಿ ಸೇವಾ ಸಂಘದದಿಂದ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಪೆÇ್ರೀತ್ಸಾಹ ಸಿಗದ ಕಾರಣ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಹೆಚ್ಚಿಸಬೇಕಲ್ಲದೇ ಪೆÇ್ರೀತ್ಸಾಹಿಸಬೇಕು ಎಂದರು. ರಾಷ್ಟ್ರ ಮಟ್ಟದಲ್ಲಿ ಆಟವಾಡುತ್ತಿರುವುದು ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಏಷ್ಯನ್ ಗೇಮ್ ಕಾಮನವೆಲ್ತ್‍ನಲ್ಲಿ ಕೂಡ ಹೆಚ್ಚಿನ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮುಂಡಗೋಡ ಸಿ. ಪಿ. ಐ ಸಿದ್ದಪ್ಪ ಸಿಮಾನಿ, ಪಿ. ಎಸ್. ಐ ಬಸವರಾಜ ಮಬನೂರ, ಕೆ. ಡಿ. ಸಿ. ಸಿ ಬ್ಯಾಂಕ್ ಮೇಲ್ವಿಚಾರಕ ಸಾಕ್ಷಾತ ನಾಯ್ಕ, ವ್ಯವಸ್ಥಾಪಕ ವಿಶಾಲ ನಿಕ್ಕಂ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಚವಡಳ್ಳಿ-ಮಲವಳ್ಳಿ ಸಹಕಾರಿ ಸೇವಾ ಸಂಘದ ಅಧ್ಯಕ್ಷ ಪರಶುರಾಮ ತಹಶೀಲ್ದಾರ್, ಉಪಾಧ್ಯಕ್ಷ ನಿಂಗಪ್ಪ, ಭದ್ರಾಪುರ, ಕಾರ್ಯದರ್ಶಿ ಗಜೇಂದ್ರ ವಾಲ್ಮೀಕಿ, ವೈ. ಪಿ ಪಾಟೀಲ, ಪಿ. ಜಿ ಪಾಟೀಲ, ಪಿ. ಬಿ. ನ್ಯಾಸರ್ಗಿ, ಭೀಮಸಿಂಗ್ ರಾಥೋಡ, ಗೋಪಾಲ ಪಾಟೀಲ, ಎ. ಕೆ. ಸಿಂಗನಳ್ಳಿ, ಮಹೇಶ ಅರ್ಕಸಾಲಿ, ಮಂಜುನಾಥ ಕಟಗಿ, ಬಸವರಾಜ ಉಗ್ಗಿನಕೇರಿ, ವೈ. ಪಿ ಭುಜಂಗಿ, ಪ್ರದೀಪ ಚವ್ಹಾಣ, ಪರಶುರಾಮ ಕುರಿಯವರ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ಓಣಿಕೇರಿ ಪರಿಚಯಿಸಿದರು. ರಾಮಚಂದ್ರ ಬಿಸವಣ್ಣವರ ನಿರೂಪಿಸಿ ವಂದಿಸಿದರು.