ಶಿರಸಿ: ಎಂಎಲ್‌ಸಿದಾಗ ದಮ್ಮಿಲ್ಲ. ಎಂಎಲ್‌ಎ ಆಗಲೇ ಬೇಕು ಎಂದು ಸಂಕಲ್ಪ ಮಾಡಿರುವುದಾಗಿ ಎಸ್.ಎಲ್ ಘೋಟ್ನೇಕರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಹಳಿಯಾಳ ರಾಜಕೀಯದಾಗ ದೇಶಪಾಂಡೆ ಅವರು ಮೊದಲು ಬೆಂಕಿ ಹಚ್ಚಿದರು, ನಾವು ಅದಕ್ಕೆ ಪೆಟ್ರೋಲ್ ಸುರಿದ್ವಿ. ಕಳೆದ 40 ವರ್ಷದಿಂದ ಪಕ್ಷದಲ್ಲಿ ಜತೆಗೆ ಇದ್ದು ರಾಜಕೀಯ ಮಾಡುತ್ತಾ ಇದ್ದೇನೆ. 40 ವರ್ಷದಲ್ಲಿ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನರಿಗೆ ಸೇರ್ಪಡೆ ಮಾಡಿದ್ದಾರೆ. ಆಗ ನೀತಿ ನಿಯಮಗಳು ಇರಲಿಲ್ಲ. ಈಗೀಗ ಬೇರೆ ಪಕ್ಷದವರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸಬೇಕೆಂದ್ರೆ ಬ್ಲಾಕ್ ಅಧ್ಯಕ್ಷರು, ನಮ್ಮ ಹಿರಿಯ ಮುಖಂಡರ ಅನುಮತಿ ಬೇಕು ಎಂದಾಗ ನನ್ನ ಹಾದಿ ನಾನು ಹಿಡಿದ್ದೇವೆ, ಅವರ ಹಾದಿ ಅವರು ಹಿಡಿದಿದ್ದಾರೆ ಎಂದು ಹೇಳಿದರು. ಪಕ್ಷಕ್ಕೆ ಬೇರೆ ಪಕ್ಷದವರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದೇನೆ. ಅದರ ಜೊತೆ ನಮ್ಮ ಅಭಿಮಾನಿ ಬಳಗವನ್ನೂ ಮಾಡಿದ್ದಾರೆ. ಅದಕ್ಕೆ ನಾವು ಬೆಂಬಲಿಸುತ್ತಿದ್ದೇನೆ ಎಂದರು.
ಹಳಿಯಾಳದಲ್ಲಿ ಅವರು ಕಾಂಗ್ರೆಸ್ ಇಬ್ಬಾಗ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ನಾನು ಇನ್ನೂ ಕಾಂಗ್ರೆಸ್ ನಲ್ಲೇ ಇದ್ದೇನೆ. ಯಾವ ಕಾರ್ಯಕರ್ತನಿಗೂ ಗೊಂದಲವಿಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ನಾವು ಪಕ್ಷಕ್ಕಾಗಿಯೂ ಕೆಲಸ ಮಾಡುತ್ತಿದ್ದೇವೆ. ನಮ್ಮ ಸ್ವಂತಕ್ಕೂ ಕೆಲಸ ಮಾಡುತ್ತಿದ್ದೇವೆ. ಇದೆಲ್ಲವೂ ಚುನಾವಣಾಗಾಗಿಯೇ ಪ್ರಯತ್ನ ಎಂದು ಸ್ಪಷ್ಟ ಪಡಿಸಿದ ಅವರು, ಪಕ್ಷದ ಟಿಕೆಟ್ ನೀಡದಿದ್ದರೆ ಕಾದು ನೋಡಿ. ಪಕ್ಷದ ಸ್ಥಿತಿಗತಿ ಅವಲೋಕಿಸಿ, ಎಲ್ಲ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ನಮ್ಮ ಅಭಿಮಾನಿ ಕಾರ್ಯಕರ್ತರು ಮಾಡುವ ನಿರ್ಣಯ ಫೈನಲ್. ಎಲ್ಲವೂ ಕಾಂಗ್ರೆಸ್ ಪರವಾಗಿಯೇ ನಿರ್ಣಯಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಕುತೂಹಲ ಮೂಡಿಸಿದರು.
ಒಟ್ಟಿನಲ್ಲಿ ಘೊಟ್ನೇಕರ್ ಅವರ ಹೇಳಿಕೆಯಿಂದ ಒಂದು ಕಾಲದಲ್ಲಿ ರಾಮ ಲಕ್ಷ್ಮಣರಂತೆ ಭಾಯಿ-ಭಾಯಿ ಆಗಿದ್ದ ದೇಶಪಾಂಡೆ ಹಾಗೂ ಘೋಟ್ನೇಕರ್ ದೂರವಾಗಿರುವ ಸಂಗತಿ ಸ್ಪಷ್ಟವಾದಂತಿದೆ.