ಶಿರಸಿ: ತಾಲೂಕಿನಲ್ಲಿ ಅ.5 ಮಂಗಳವಾರ 460 ಡೋಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 460 ಡೋಸ್ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ 50, ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ 50, ಪ್ರಾಥಮಿಕ ಆರೋಗ್ಯ ಕೇಂದ್ರ ದಾಸನಕೊಪ್ಪದಲ್ಲಿ 60, ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರ 20, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್’ನಲ್ಲಿ 10, ಕಕ್ಕಳ್ಳಿಯಲ್ಲಿ 10, ಶಿರಸಿ ತಾಲೂಕಾಸ್ಪತ್ರೆಯಲ್ಲಿ 60, ಶ್ರೀರಾಮ ಕಾಲೋನಿ ಶಾಲೆಯಲ್ಲಿ 100, ರಾಮನಗರದಲ್ಲಿ 100 ಡೋಸ್ ವ್ಯಾಕ್ಸಿನ್ ಲಭ್ಯವಿದೆ ಎಂದು ತಿಳಿಸಿದ್ದಾರೆ.