• Slide
    Slide
    Slide
    previous arrow
    next arrow
  • ಶಿರಸಿ-ಕುಮಟಾ ರಸ್ತೆ ಕಾಮಗಾರಿಗೆ ಅಡ್ಡಿ ವಿರೋಧಿಸಿ ಅ. 8ಕ್ಕೆ ರಸ್ತೆ ತಡೆ

    300x250 AD

    ಶಿರಸಿ: ಶಿರಸಿ-ಕುಮಟಾ ರಸ್ತೆಯ ಹೆಗಡೆಕಟ್ಟಾ ಕ್ರಾಸ್ ಬಳಿ ಅ.8 ರಂದು ಬೆಳಗ್ಗೆ 10 ಕ್ಕೆ ರಸ್ತೆ ತಡೆ ನಡೆಯಲಿದೆ. ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಭೆ ಸೇರಿದ ಅಭಿವೃದ್ಧಿ ಪರ ಸಮಾನ ಮನಸ್ಕರು ರಸ್ತೆ ತಡೆ ನಡೆಸಲು ತೀರ್ಮಾನಿಸಿದರು.


    ಶಿರಸಿ-ಕುಮಟಾ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಬೇಕು. ಸಮಾನ ಮನಸ್ಕ ನಾಗರಿಕರು ಸ್ವಯಂ ಪ್ರೇರಿತವಾಗಿ ಬರುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಸಾಗರಮಾಲಾ ಯೋಜನೆ ಅಡಿಯಲ್ಲಿ ಅನುದಾನ ಬಿಡುಗಡೆ ಯಾಗಿ ಅರ್ಧಂಬರ್ಧ ಕಾಮಗಾರಿ ಸಹ ನಡೆದಿದೆ. ಈಗ ಸ್ಥಗಿತಗೊಳಿಸುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಹೇಳಿದರು.


    ಜನರಲ್ಲಿ ಸುಳ್ಳು ಸುದ್ದಿಗಳನ್ನು ನಕಲಿ ಪರಿಸರ ವಾದಿಗಳು ಬಿತ್ತುತ್ತಿದ್ದಾರೆ. ನಕಲಿ ಪರಿಸರ ವಾದಿಗಳ ವಿರುದ್ಧ ನಾವು ಧ್ವನಿ ಎತ್ತಬೇಕಿದೆ.
    ಪರಿಸರದ ಬಗ್ಗೆ ಜ್ಞಾನ ವಿಲ್ಲದವರು ಪರಿಸರದ ಬಗ್ಗೆ ಮಾತನಾಡುತ್ತಿದ್ದಾರೆ. ಇವರು ಶಿರಸಿ ನಗರ ಹಾಗೂ ಶಿರಸಿಯ ಅಭಿವೃದ್ಧಿಗೆ ಹಿಂದಿನಿಂದಲೂ ಹಲವು ತೊಡಕುಗಳನ್ನು ಕೊಡುತ್ತಲೇ ಇದ್ದಾರೆ. ಸ್ಥಳೀಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಶಿರಸಿ ಕುಮಟಾ ಕಾಮಗಾರಿ ಕುರಿತು ಸಾಮಾಜಿಕ ಜಾಲತಾಣ ಗಳಲ್ಲಿ ಹಲವು ನಕಲಿ ಪರಿಸರ ವಾದಿಗಳು ಹಣ ಕೇಳುತ್ತಿದ್ದಾರೆ ಎಂದು ದೂರಿದರು.

    300x250 AD


    ಸಭೆಯಲ್ಲಿ ಉದ್ಯಮಿ ಉಪೇಂದ್ರ ಪೈ, ಅಭಿವೃದ್ಧಿ ಚಿಂತಕರಾದ ಎಮ್. ಎಮ್ ಭಟ್, ರಾಜೇಶ್ ಶೆಟ್ಟಿ, ಜಿ.ಎನ್. ಭಟ್ಟ, ಅನಿಲ್ ನಾಯ್ಕ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top