ಶಿರಸಿ: ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರ ಪಾತ್ರ ದೊಡ್ಡದು ಎಂದು ಡಿಎನ್ ಗಾಂವ್ಕರ್ ತಿರುಗೇಟು ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶಪಾಂಡೆ ಅವರು ಏನು ಮಾಡಿದ್ದಾರೆ ಎಂದು ವಿವೇಕ ಹೆಬ್ಬಾರ್ ಪ್ರಶ್ನಿಸಿರುವುದೇ ಅವರು ವಿವೇಕ ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದು ಟೀಕಿಸಿದರು.
ಯಲ್ಲಾಪುರದಲ್ಲಿ ಅಗ್ನಿಶಾಮಕ ದಳ, ನೂರು ಹಾಸಿಗೆ ಬೆಡ್, ಪ.ಪಂ ಕಟ್ಟಡ, ಪಿ.ಯು. ಕಾಲೇಜಿನ ಕಟ್ಟಡಕ್ಕೆ ಬುನಾದಿ ಹಾಕಿದವರು ದೇಶಪಾಂಡೆ. ಡಿಗ್ರಿ ಕಾಲೇಜು ಕಟ್ಟಡ, ಹಾಸ್ಟೇಲು, ಬೇಡ್ತಿ ಬ್ರಿಡ್ಜ್ ಮಂಜೂರಾತಿಗೆ ದೇಶಪಾಂಡೆ ಅವರ ಶ್ರಮ ಇದೆ.
ಕೆರೆ ಹೂಳೆತ್ತುವ ಕಾರ್ಯ, ಮುಂಡಗೋಡದ ಚಿಗಣಿ ಡ್ಯಾಂ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಲ್ಲೂ ಅವರ ಪಾಲಿದೆ. ಹೇಳಲು ಇಂತಹಾ ಸಾಕಷ್ಟು ಉದಾಹರಣೆ ಇದೆ ಎಂದು ತಿಳಿಸಿದರು.
ಪ್ರಶಾಂತ ದೇಶಪಾಂಡೆ ಅಭ್ಯರ್ಥಿ ?
ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಶಾಂತ್ ದೇಶಪಾಂಡೆ ಅವರನ್ನ ಅಭ್ಯರ್ಥಿ ಮಾಡಬೇಕು. ಅವರಿಗೆ ಅನುಭವ ಇದೆ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಅವರಿಗೆ ಟಿಕೇಟ್ ನೀಡಲು ನಾವು ಆಗ್ರಹಿಸುವುದಾಗಿ ಗಾಂವ್ಕರ್ ತಿಳಿಸಿದರು. ಇದಕ್ಕೆ ಎಲ್ಲರ ಅಭಿಮತ ಇದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ದೀಪಕ್ ದೊಡ್ಡುರು, ಶಿವಾಜಿ ಕಾಳೇರಮನೆ, ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಪ್ ನಾಯ್ಕ್, ಕೃಷ್ಣ ಹಿರೇಹಳ್ಳಿ ಮತ್ತಿತರರು ಇದ್ದರು.