• Slide
    Slide
    Slide
    previous arrow
    next arrow
  • ಅತಿಕ್ರಮಣದಾರರ ಅರ್ಜಿ ಸುಪ್ರೀಂ ಕೋರ್ಟ ನಿರ್ದೇಶನದಂತೆ ವಿಚಾರಿಸಿ; ರವೀಂದ್ರ ನಾಯ್ಕ ಆಗ್ರಹ

    300x250 AD

    ಜೋಯಿಡಾ: ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿನ ಅರಣ್ಯವಾಸಿಗಳಿಗೆ ಕಾನೂನಿನಂತೆ ಸಾಕಷ್ಟು ಕಾಲಾವಕಾಶ ನೀಡಿ ಅರ್ಜಿ ಮಂಜೂರಿ ಪ್ರಕ್ರಿಯೆ ಜರಗಿಸಬೇಕು. ಇಲ್ಲದಿದ್ದಲ್ಲಿ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕಿಗೆ ಆತಂಕ ಉಂಟು ಮಾಡುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    ಅವರು ಇಂದು ಜೋಯಿಡಾ ತಾಲೂಕಿನ ಕುಣಬಿ ಭವನದ ಆವರಣದಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಅದರಂತೆ ಮಂಜೂರಿಗೆ ಸಂಬಂಧಿಸಿ ಕಾಯಿದೆ ಅಡಿಯಲ್ಲಿ ನೀರಿಕ್ಷೆಯಲ್ಲಿ ಇರುವಂತಹ ಅರಣ್ಯವಾಸಿಗಳಿಗೆ ಸಾಮಾಜಿಕ ನ್ಯಾಯದಡಿಯಲ್ಲಿ ಮಂಜೂರಿ ಪ್ರಕ್ರೀಯೆ ಜರುಗಿಸಲು ಅವರು ಅಗ್ರಹಿಸುತ್ತಾ ಅರಣ್ಯ ಹಕ್ಕು ಸಮಿತಿಗಳು ಕಾನೂನಿಗೆ ವ್ಯತಿರಿಕ್ತವಾಗಿ ಕಾನೂನಿನ ವಿಧಿ-ವಿಧಾನ ಅನುಸರಿಸದೇ ಮಂಜೂರಿ ಪ್ರಕ್ರೀಯೆ ಜಿಲ್ಲೆಯಲ್ಲಿ ಜರಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

    ಪಾರಂಪರಿಕ ಅರಣ್ಯವಾಸಿಗಳಿಗೆ ಸಾಂದರ್ಭೀಕ ದಾಖಲೆಗಳ ಆಧಾರದ ಮೇಲೆ ಮಂಜೂರಿ ಪ್ರಕ್ರೀಯೆಗೆ ಅವಕಾಶ ನೀಡಲು ಕಾನೂನಿನಲ್ಲಿ ಉಲ್ಲೇಖವಿದ್ದರೂ ಅರಣ್ಯ ಹಕ್ಕು ಸಮಿತಿಗಳು ಕಾನೂನಿನ ವ್ಯಾಪ್ತಿಗೆ ಮೀರಿ ಅರ್ಜಿಗಳನ್ನು ತೀರಸ್ಕರಿಸುವುದು ಖೇದಕರ ಎಂದು ಹೇಳಿದರು.

    300x250 AD

    ಅರಣ್ಯ ಅಧಿಕಾರಿಗಳ ದೌರ್ಜನ್ಯ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಪ್ರಕ್ರೀಯೆ ಜರಗುತ್ತಿರುವ ಸಂದರ್ಭದಲ್ಲಿ ಅತಿಕ್ರಮಣದಾರರ ಸಾಗುವಳಿಗೆ ಆತಂಕ ಪಡಿಸಬಾರದೆಂಬ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ಅರಣ್ಯ ಸಿಬ್ಬಂದಿಗಳು ಒಕ್ಕಲೆಬ್ಬಿಸುವ ಮತ್ತು ಆತಂಕ ಪಡಿಸುವ ಕ್ರೀಯೆ ಜರಗುತ್ತಿರುವುದು ಖಂಡನಾರ್ಯ ಈ ದಿಶೆಯಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    ಸಭೆಯಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ಸುಭಾಷ್ ಗಾವಡಾ ಅವರು ಮಾಡಿ ಅರಣ್ಯ ಭೂಮಿ ರಕ್ಷಣೆಗೆ ಸಂಘಟನೆ ಮುಖ್ಯ. ಅರಣ್ಯವಾಸಿಗಳು ಜಾಗೃತರಾಗಬೇಕು. ಅತಿಕ್ರಮಣದಾರರು ಸಾಂಘೀಕ ಹೋರಾಟ ಮಾಡುವುದಾಗಿ ಹೇಳಿದರು.

    ಸಭೆಯಲ್ಲಿ ಶಿವದಾಸ ಕೆ ನಾಯರ್, ದೇವಿದಾಸ ಕೃಷ್ಣ ದೇಸಾಯಿ, ಮಾಬ್ಲು ಪುಂಡಲೀಕ, ಶರಣಪ್ಪ ಗದ್ದಿ, ಮಮತಾಜ ಮುಜಾವರ, ಪ್ರಸನ್ನ ಗಾವಡಾ, ಸುಭಾಷ್ ವೇಳಿಪ, ಪ್ರಭಾಕರ ಜೋಕನಗಾಳಿ, ಅರುಣ ಕುಮಾರ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top