• first
    second
    third
    previous arrow
    next arrow
  • ಅರಣ್ಯ ಇಲಾಖೆಯಿಂದ ವನ್ಯಜೀವಿ ಸಪ್ತಾಹಕ್ಕೆ ಚಾಲನೆ

    300x250 AD

    ಶಿರಸಿ: ಕಾಡು ಬೆಳೆಸಿ ನಾಡು ಉಳಿಸಿ, ಎಂಬ ಶೀರ್ಷಿಕೆ ಅಡಿಯಲ್ಲಿ ವನ್ಯಜೀವಿಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ 67 ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮಕ್ಕೆ ಸೋಮವಾರ ಶಿರಸಿಯಲ್ಲಿ ಚಾಲನೆ ನೀಡಲಾಯಿತು.

    ಶಿರಸಿ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಡಿ.ಎಫ್.ಓ. ಎಸ್.ಜಿ.ಹೆಗಡೆ ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಕಚೇರಿಯಿಂದ ಹೊರಟ ಜಾಥಾ ನಗರದ ಜ್ಯೂ ಸರ್ಕಲ್, ರಾಘವೇಂದ್ರ ಸರ್ಕಲ್ ವರೆಗೆ ತೆರಳಿ ಸಾರ್ವಜನಿಕರಿಗೆ ಅರಣ್ಯ ಹಾಗೂ ವನ್ಯಜೀವಿಗಳ ಕುರಿತು ಜಾಗೃತಿ ಮೂಡಿಸಲಾಯಿತು.

    300x250 AD

    ಸಪ್ತಾಹದ ಅಂಗವಾಗಿ ತಾಲೂಕಿನ ಎಲ್ಲಾ ವಲಯಗಳಲ್ಲಿ ರಂಗೊಲಿ ಸ್ಪರ್ಧೆ, ವಾಚನ ಹಾಗೂ ಕವನ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಿ.ಎಫ್.ಓ.ಎಸ್.ಜಿ.ಹೆಗಡೆ ತಿಳಿಸಿದರು.

    ಈ ವೇಳೆ ಎಸಿ.ಎಪ್.ಡಿ.ರಘು, ಆರ್.ಎಪ್ ಗಳಾದ ಬಸವರಾಜ ಬೊಚಳ್ಳಿ,ಉಷಾ ಕಬ್ಬೆರ್, ಪವಿತ್ರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

    Share This
    300x250 AD
    300x250 AD
    300x250 AD
    Back to top