ಕಾರವಾರ : ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಕೇಂದ್ರದಿoದ ಆಗಬೇಕಾದ ಕೆಲಸ ಎಂಪಿಯಿoದ ಆಗುತ್ತಿಲ್ಲ , ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಜಿಲ್ಲೆಯಿಂದಲೇ ಕಾಣೆಯಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕುಮಟಾ ಅಧ್ಯಕ್ಷ ನಾಗರಾಜ್ ಶೇಟ್ ಆರೋಪಿಸಿದ್ದಾರೆ.
ಸಂಸದರು ಕಳೆದ ಅನೇಕ ದಿನಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಅವರನ್ನು ಗೂಗಲ್ ಮೂಲಕ ಹುಡುಕಬೇಕೆಂದು ಟೀಕಿಸಿದ್ದಾರೆ.ಜಿಲ್ಲೆಯಲ್ಲಿ ಐ.ಆರ್.ಬಿ. ಕಂಪೆನಿ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮಾಡುತ್ತಿದೆ. ಕಾಮಗಾರಿ ಅಸಮರ್ಪಕವಾಗಿ ನಡೆದಿದೆ. ಆದರೆ ಕಾಮಗಾರಿ ಮುಗಿಯುವ ಪೂರ್ವದಲ್ಲಿ ಟೋಲ್ ವಸೂಲಿ ಆರಂಭಿದಲಾಗಿದೆ ಎಂದರು.