ನವದೆಹಲಿ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತವು ಒಟ್ಟು 101.89 ಬಿಲಿಯನ್ ಡಾಲರ್ ರಫ್ತುಮಾಡಿವ ಮೂಲಕ ಮೊದಲ ಬಾರಿಗೆ, ಭಾರತದ ರಫ್ತುಗಳು ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ 100 ಬಿಲಿಯನ್ ಗಡಿ ದಾಟಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನೀಡಿದ ಅಧಿಕೃತ ಹೇಳಿಕೆಯ ಪ್ರಕಾರ, ಭಾರತದ ರಫ್ತುಗಳು 197 ಬಿಲಿಯನ್ ತಲುಪಿದೆ. ಸೆಪ್ಟೆಂಬರ್‌ನಲ್ಲಿ ರಫ್ತು 33.44 ಬಿಲಿಯನ್ ಇತ್ತು, ಆಗಸ್ಟ್ನಲ್ಲಿ 33.28 ಬಿಲಿಯನ್ ಮತ್ತು ಜುಲೈನಲ್ಲಿ 35.17 ಬಿಲಿಯನ್ ಇತ್ತು. ಒಂದು ವರ್ಷದಲ್ಲಿ 400 ಬಿಲಿಯನ್ ರಫ್ತು ಮಾಡುವ ಗುರಿ ಹೊಂದಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಭಾರತದ ರಫ್ತುಗಳು 197 ಬಿಲಿಯನ್ ಡಾಲರ್‌ಗಳನ್ನು ಮುಟ್ಟಿದೆ. ಈ ಹಣಕಾಸು ವರ್ಷದಲ್ಲಿ 400 ಬಿಲಿಯನ್ ರಫ್ತು ಮಾಡುವ ಗುರಿಯನ್ನು ಹೊಂದಲಾಗಿದೆ.
ವಾಣಿಜ್ಯ ಸಚಿವಾಲಯ ಹೊರಡಿಸಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 2021 ರಲ್ಲಿ ಪೆಟ್ರೋಲಿಯಂ ರಫ್ತುಗಳ ಮೌಲ್ಯ 28.53 ಬಿಲಿಯನ್ ಇದ್ದು, ಪೆಟ್ರೋಲಿಯಂ ರಫ್ತುಗಳ ಮೇಲೆ 18.72 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ