ಶಿರಸಿ: ನಗರದ ಕೊರೊಕೆ ಸ್ಟುಡಿಯೋದ ಸಹಯೋಗದಲ್ಲಿ ಅ.10 ರಂದು ನಡೆಯಲಿರುವ ಎಸ್ ಬಿ ಬಾಲಸುಬ್ರಹ್ಮಣ್ಯಂ ಹಾಗೂ ನಟ, ನಿರ್ದೇಶಕ ಶಂಕರ್ ನಾಗ್ ಸ್ಮರಣಾರ್ಥ ನುಡಿನಮನ ಗೀತಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಕರೊಕೆ ಸ್ಟುಡಿಯೋದಲ್ಲಿ ಪತ್ರಕರ್ತ ರಾಜು ಕಾನಸೂರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಕಂಡ ಅತ್ಯುನ್ನತ ಗಾಯಕ ಹಾಗೂ ದೇಶದ ಅತ್ಯುತ್ತಮ ನಟ ಹಾಗೂ ನಿರ್ದೇಶಕ ನಮ್ಮ ಜಿಲ್ಲೆಯ ಶಂಕರ್ ನಾಗ್ ಅವರ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ವಿಷಯ. ಈ ವೇದಿಕೆಯಿಂದ ಜಿಲ್ಲೆಯ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ ಎಂದರು.
ವೇದಿಕೆಯಲ್ಲಿ ಪರ್ತಕರ್ತ ಪ್ರವೀಣ ಹೆಗಡೆ, ಬಿ ವಿ ಹುಲಗೇಶ, ಕರೊಕೆ ಸ್ಟುಡಿಯೋದ ಶಿರಸಿ ರತ್ನಾಕರ, ದಿವ್ಯಾ ಶೇಟ್, ಕರೋಕೆ ಸ್ಟುಡಿಯೋದ ವಿದ್ಯಾರ್ಥಿಗಳು, ಮತ್ತಿರರು ಇದ್ದರು.