ಶಿರಸಿ: ಅಂಗನವಾಡಿ ಕೆಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿರುವ ಕಾರ್ಯಕರ್ತೆಯರನ್ನು ಶಿಕ್ಷಕರೆಂದು ಸರಕಾರ ಪರಿಗಣಿಸಬೇಕಾಗಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಜಯರಾಮ ಹೆಗಡೆ ಧೋರಣಗಿರಿ ತಿಳಿಸಿದರು.
ತಾಲೂಕಿನ ವಾನಳ್ಳಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾನಳ್ಳಿ ಹಾಗೂ ಕೊಡ್ನಗದ್ದೆ ಗ್ರಾಮ ಪಂಚಾಯತ ಹಾಗೂ ಶ್ರೀ ಗ.ಮಾ.ಶಾಲೆಯ ಸಹಯೋಗದಲ್ಲಿ ನಡೆದ ಪೋಷಣಾ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದ ಅವರು, ಸರಕಾರಿ ಶಾಲೆಯ ಶಿಕ್ಷರಂತೆಯೇ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿರುವುದರಿಂದ, ಶಿಕ್ಷಕರೆಂದೇ ಪರಿಗಣಿಸುವಂತೆ, ಶಿಶು ಅಭಿವೃದ್ಧಿ ಇಲಾಖೆ ಸರಕಾರಕ್ಕೆ ಶಿಫಾರಸ್ಸುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ರವಿ ಚಿಂಚನಳ್ಳಿ, ಕಕ್ಕಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಗಣೇಶ ಪ್ರಸಾದ, ವಾನಳ್ಳಿ ಗ್ರಾ.ಪಂ ಪಿ.ಡಿ.ಓ ರಂಗಪ್ಪ, ಕೊಡ್ನಗದ್ದೆ ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ ಭಟ್ಟ, ಕೊಡ್ನಗದ್ದೆ ಗ್ರಾ.ಪಂ. ಸದಸ್ಯರಾದ ಪ್ರವೀಣ ಹೆಗಡೆ, ಗ.ಮಾ ಶಾಲಾ ಮುಖ್ಯೊಪಾಧ್ಯಾಯರಾದ ರಾಘವ ಹೆಗಡೆ, ತಾ.ಪಂ ಮಾಜಿ ಉಪಾದ್ಯಕ್ಷರಾದ ದತ್ತಾತ್ರೆಯ ವೈದ್ಯ ಕಕ್ಕಳ್ಳಿ, ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಎಸ್.ಹೆಗಡೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಶು ಅಬಿವೃದ್ಧಿ ಇಲಾಖೆಯ ಯೋಜನಾಧಿಕಾರಿಯಾಗಿರುವ ದತ್ತಾತ್ರೇಯ ಭಟ್ಟ ಮಾತನಾಡಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಯಲ್ಲಿ, ಆರೋಗ್ಯ ನೈರ್ಮಲ್ಯ ಹಾಗೂ ಕ್ರೀಡೆಯಂತಹ ಹಲವು ವಿಧಗಳಲ್ಲಿ ಶಿಕ್ಷಣ ನೀಡುತ್ತ, ಮಗುವಿನ ವ್ಯಕ್ತಿತ್ವ ರೂಪಿಸಲು ಅಂಗನವಾಡಿ ಕಾರ್ಯಕರ್ತೆಯರು ಅವಿರತವಾಗಿ ಶ್ರಮಿಸುತ್ತಿದಾರೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಹಾಡಿದ ಪ್ರಾರ್ಥನೆಯೊಂದಿಗೆ, ಸಭಾ ಕಾರ್ಯಕ್ರಮ ಆರಂಭವಾಯಿತು. ಗುರುವಳ್ಳಿ ಕಾರ್ಯಕರ್ತೆ ಯಶೋಧಾ ಗೌಡ ಸ್ವಾಗತಿಸಿದರು. ಶಿರಸಗಾಂವ ಕಾರ್ಯಕರ್ತೆ ಅರುಣಾ ಭಟ್ಟ ಕಾರ್ಯಕ್ರಮ ನಿರೂಪಸಿದರೆ, ತುಳಗೇರಿ ಕಾರ್ಯಕರ್ತೆ ಶೋಭಾ ಭಟ್ಟ ವಂದಿಸಿದರು.