ಮುಂಡಗೋಡ: ನಗರದ ಶಿರಸಿ ರಸ್ತೆಯಲ್ಲಿರುವ ಹಾರ್ಡವೇರ್ ಅಂಗಡಿಯ ಶಟರ್ಸ್ ಮುರಿದು ಅಂಗಡಿಯೊಳಗಿದ್ದ ನಗದು ಹಾಗೂ ವಿವಿಧ ಪರಿಕರಗಳನ್ನು ಕಳ್ಳತನ ನಡೆಸಿದ ಘಟನೆ ನಡೆದಿದೆ.
ಇಲ್ಲಿನ ಕದಂಬ ಸ್ಟೀಲ್ಸ್ & ಹಾರ್ಡ್ವೇರ್ ನಲ್ಲಿ ಕಳ್ಳತನವಾಗಿದ್ದು, ಸುಮಾರು ಹದಿನೈದು ಸಾವಿರ ರೂಪಾಯಿ ಹಾಗೂ ಆರು ಸಾವಿರ ಬೆಲೆ ಬಾಳುವ ಡಿ.ವಿ.ಆರ್. ಅನ್ನು ಕಳ್ಳರು ದೋಚಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.