ಬೆಂಗಳೂರು: ರಾಜ್ಯದ ಅನೇಕ ಕಲಾವಿದರು ಮಾಸಾಶನ ಒದಗಿಸುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಅರ್ಜಿಗಳ ವಿಲೇವಾರಿ ತ್ವರಿತವಾಗಿ ನಡೆಯದಿದ್ದುದರಿಂದ ಮಾಸಾಶನ ಸಿಗದೆ ಕಲಾವಿದರು ಸಂಕಷ್ಟ ಅನುಭವಿಸುವಂತಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು,ಕಲಾವಿದರಿಗೆ ಮಾಸಾಶನ ನೀಡಲು ಆದೇಶಿಸಲಾಗಿದ್ದು, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕಲಾವಿದರ ಅರ್ಜಿಗಳನ್ನು 3 ತಿಂಗಳಿಗೊಮ್ಮೆ ಇತ್ಯರ್ಥ ಮಾಡಲಾಗುತ್ತದೆ. ಹಾಗೆಯೇ ಸಲ್ಲಿಕೆಯಾದ ಅರ್ಜಿಗಳನ್ನು ಒಂದು ವರ್ಷದ ಬದಲಾಗಿ ಆರು ತಿಂಗಳಿಗೊಮ್ಮೆ ಪರಿಶೀಲನೆ ಮಾಡಿ, ಮಾಸಾಶನ ಒದಗಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಸಹ ಅವರು ನೀಡಿದ್ದಾರೆ.