ಬೆಂಗಳೂರು: ರಾಜ್ಯ ಸರ್ಕಾರದ ಎ ಗ್ರೇಡ್ ದೇವಾಲಯಗಳಲ್ಲಿ ಆರಂಭಿಕ ಹಂತದಲ್ಲಿ ಅಕ್ಟೋಬರ್ 3 ರಿಂದ ಜಾರಿಗೆ ಬರುವಂತೆ ವಸ್ತ್ರ ಸಂಹಿತೆಯನ್ನು ಜಾರಿ ತರುವುದಕ್ಕೆ ಧಾರ್ಮಿಕ ಪರಿಷತ್ ಮುಂದಾಗಿದ್ದು, ಮೊದಲ ಹಂತದಲ್ಲಿ ರಾಜ್ಯದ 216 ದೇವಸ್ಥಾನಗಳಲ್ಲಿ ಈ ನಿಯಮವನ್ನು ಜಾರಿಗೆ ತರಲು ಮುಂದಾಗಿದ ಎನ್ನಲಾಗಿದೆ.
ದೇವಸ್ಥಾನಗಳಳಿಗೆ ಬರುವ ಕೆಲವು ಮಂದಿ ವಸ್ತ್ರವನ್ನು ಅಸಭ್ಯವಾಗಿ ಧರಿಸಿ ಬರುತ್ತಿದ್ದರು ಎನ್ನುವ ಆರೋಪ ಕೆಲ ಭಕ್ತರಿಂದ ಕೇಳಿ ಬರುತಿತ್ತು, ಹೀಗಾಗಿ ಇವೆಲ್ಲವನ್ನು ಮನಗಂಡಿರುವ ರಾಜ್ಯ ಸರ್ಕಾರ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ಮುಂದಾಗಿದೆ.
ಬರ್ಮುಡಾ ಸೇರಿದಂತೆ ಕೆಲವು ಉಡುಪುಗಳನ್ನು ಧರಿಸಿ ದೇವರ ದರ್ಶನವನ್ನು ಮಾಡಲು ಅವಕಾಶ ಇರೋದಿಲ್ಲ ಎನ್ನಲಾಗಿದೆ. ದೇವಾಲಯಕ್ಕೆ ಬರುವ ಭಕ್ತರು ಸಾಂಪ್ರದಾಯಕ ಉಡುಗೆ ಧರಿಸಿ ಬಂದರೆ ಉತ್ತಮ ಎನ್ನಲಾಗಿದೆ ಕೂಡ.