ಸಿದ್ದಾಪುರ: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಅಂಗವಾಗಿ ಗ್ರಾಮ ಅರಣ್ಯ ಸಮಿತಿ ಉಂಚಳ್ಳಿ ಮತ್ತು ಎಫ್.ಟಿ.ಟಿ.ಎಚ್ ಬಳಸುವ ಗ್ರಾಹಕರು ಉಂಚಳ್ಳಿ ಇವರ ಆಶ್ರಯದಲ್ಲಿ ಉಂಚಳ್ಳಿ ಜಲಪಾತದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.
ಊರಿನ ಯುವಕರು ಒಟ್ಟಾಗಿ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಕ್ಕೆ ತೆರಳುವ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.