ಕಾರವಾರ: ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಮತದಾರರ ನೋಂದಣಿ ಮಾಡಿಕೊಳ್ಳುವಂತೆ ಕಾರವಾರ ತಹಸೀಲ್ದಾರ್ ಅವರು ತಿಳಿಸಿದ್ದಾರೆ.
ಮತದಾರರ ನಿಯಮಗಳು, 1960ರ 31(3)ನೇ ನಿಯಮದ ಅನುಸಾರ, ಭಾರತದ ಪ್ರಜೆಯಾಗಿರುವ, ಆಯಾ ಮತಕ್ಷೇತದೊಳಗಡೆ ಸಾಮಾನ್ಯ ನಿವಾಸಿಯಾಗಿರುವ ಮತ್ತು 2021ರ ನ.1ಕ್ಕೆ ಮೊದಲು 6 ವರ್ಷಗಳ ಕನಿಷ್ಟ ಒಟ್ಟು 3 ವರ್ಷಗಳಷ್ಟು, ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ದಿಷ್ಟ ಪಡಿಸಿದಂತೆ, ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ.
ಅಂತಹ ಅರ್ಹ ವ್ಯಕ್ತಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿಗದಿತ ನಮೂನೆ-19ರ (ದ್ವಿಪ್ರತಿಯಲ್ಲಿ) ದೃಢೀಕೃತ ಆಧಾರ ಕಾರ್ಡ್ ಪ್ರತಿ, ಪಾಸ್ ಪೆÇೀರ್ಟ್ ಅಳತೆಯ ಭಾವಚಿತ್ರ, ಪ್ರಮಾಣ ಪತ್ರ (ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ), ಮತದಾರರ ಗುರುತಿನ ಚೀಟಿ, ವಿವಿಧ ದಾಖಲಾತಿಗಳೊಂದಿಗೆ ನೋಂದಣಾಧಿಕಾರಿ ಅಥವಾ ನಿಯೋಜಿತ ಅಧಿಕಾರಿಗಳು ತಹಶೀಲ್ದಾರ್ ಕಾರ್ಯಾಲಯ ಕಾರವಾರ ನ.6 ರೊಳಗೆ ಸಲ್ಲಿಸಲು ಸೂಚಿಸಿದೆ.