ಭಟ್ಕಳ: ತಾಲೂಕಿನ ವೆಂಕಟಾಪುರ ಹೊಳೆಯ ನೀರಕಂಠದ ಸಮೀಪದಲ್ಲಿ ಹೊಳೆಯ ನಡುವೆ ಇರುವ ಮರಳು ದಿಬ್ಬದ ಮೇಲೆ ಕಳೆದ ಎರಡು ದಿನಗಳಿಂದ ಮೊಸಳೆ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ವೆಂಕಟಾಪುರ ನದಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾಗಿದ್ದು ಮಳೆಗಾಲದಲ್ಲಿ ನೀರಿನ ರಭಸಕ್ಕೆ ಮೊಸಳೆ ಬಂದಿರಬಹುದು ಎನ್ನುವುದು ಸ್ಥಳೀಯರ ಸಂಶಯ. ಮರಳು ದಿಬ್ಬದ ಮೇಲೆ ಮಲಗಿದ್ದ ಮೊಸಳೆಯನ್ನು ಕಂಡಿದ್ದ ಸ್ಥಳೀಯರು ಫೆÇೀಟೋ ಕ್ಲಿಕ್ಕಿಸಿದ್ದಾರೆ. ಸುಮಾರು 5-6 ಅಡಿ ಉದ್ದವಿದ್ದ ಮೊಸಳೆಯಾಗಿದ್ದು ಇದೇ ಪ್ರದೇಶದಲ್ಲಿ ಸದಾ ಜನರು ನೀರಿ ಗಿಳಿಯುವುದು, ಈಜುವುದು ಮಾಡುತ್ತಾರೆ. ಮೊಸಳೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೊಸಳೆ ಕಾಣಿಸಿಕೊಂಡಿದ್ದನ್ನು ಅರಣ್ಯ ಇಲಾಖೆಯ ಗಮನಕ್ಕೆ ಸಾರ್ವಜನಿಕರು ತಂದಿದ್ದು ಅರಣ್ಯ ಇಲಾಖೆ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.