Slide
Slide
Slide
previous arrow
next arrow

ಸುವಿಚಾರ

300x250 AD


ಯಃ ಸ್ವಭಾವೋ ಹಿ ಯಸ್ಯಾಸ್ತೇ ಸ ನಿತ್ಯಂ ದುರತಿಕ್ರಮಃ
ಶ್ವಾ ಯದಿ ಕ್ರಿಯತೇ ರಾಜಾ ತತ್ಕಿಂ ನಾಶ್ನಾತ್ಯುಪಾನಹಮ್ ||

ಯಾರಿಗೆ ಯಾವುದು ಸ್ವಭಾವವಾಗಿ ಬಂದಿರುತ್ತದೆಯೋ ಅದೆಂದಿಗಿದ್ದರೂ ಮೀರಲಸಾಧ್ಯವಾದ್ದು. ಸ್ವಭಾವ ಅನ್ನುವುದಕ್ಕೇನೆ ’ತನ್ನತನ’ ಎನ್ನುವ ಅರ್ಥವಿದೆ. ಹಾಗಾಗಿ ಅದನ್ನು ಮೀರಲಸಾಧ್ಯ. ಒಂದಿಷ್ಟು ಕಾಲ ಮುಚ್ಚಿಡಬಹುದಷ್ಟೆ. ನಾಯಿಯೊಂದನ್ನು ರಾಜನನ್ನಾಗಿ ಮಾಡಿದರೆ ಅದೇನು ಆ ಹೊತ್ತಿನಿಂದ ಕಂಡ ಕಂಡವರ ಚಪ್ಪಲಿಯನ್ನು ಕಚ್ಚಿತಿನ್ನುವುದನ್ನು ಬಿಟ್ಟುಬಿಡುತ್ತದೆಯೇ? ಇಲ್ಲವಲ್ಲ! ಚರ್ಮದ ವಾಸನೆಯ ಚಪ್ಪಲಿಯನ್ನು ಕಚ್ಚುವುದು ನಾಯಿಯ ಸ್ವಭಾವ. ರಾಜಸ್ಥಾನದಲ್ಲಿ ಕುಳ್ಳಿರಿಸಿದ ಮಾತ್ರಕ್ಕೆ ಆ ಸ್ವಭಾವನ್ನು ನಾಯಿಯು ಮೀರಲಾರದು. ಹುಟ್ಟು ಗುಣ ಸುಟ್ಟರೂ ಹೋಗದು ಅನ್ನುವ ಕನ್ನಡದ ನಾಣ್ಣುಡಿಯೂ ಈ ಅರ್ಥದಲ್ಲೇ ಪ್ರಸಿದ್ಧವಾಗಿದೆ.

300x250 AD

ಶ್ರೀ ನವೀನ ಗಂಗೋತ್ರಿ

Share This
300x250 AD
300x250 AD
300x250 AD
Back to top