ಶಿರಸಿ: ಶಿರಸಿ ಲಯನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ಲಯನ್ಸ್ ಎಜ್ಯುಕೇಶನ್ ಸೊಸೈಟಿ ಸಹಯೋಗದೊಂದಿಗೆ, ಇಂದು ಲಯನ್ಸ್ ಶಿಕ್ಷಣ ಸಂಸ್ಥೆಯ ಬಹುದಿನದ ಕನಸಾದ ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಲ. ಎನ್. ವಿ ಜಿ ಭಟ್, ಉಪಾಧ್ಯಕ್ಷರಾದ ಲ. ಪ್ರಭಾಕರ್ ಹೆಗಡೆ, ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲ. ಪೆÇ್ರಫೆಸರ್ ರವಿ ನಾಯಕ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಂಸ್ಥೆಯ ಸದಸ್ಯ ಲೋಕೇಶ್ ಹೆಗಡೆ, ಶ್ರೀಕಾಂತ್ ಹೆಗಡೆ ಮತ್ತು ಶ್ಯಾಮಸುಂದರ್ ಭಟ್ ಇವರುಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಳೆಯ ವಿದ್ಯಾರ್ಥಿಗಳಾದ ಮಹಿಮಾ ಹೆಗಡೆ, ಅಂಜನಾ ಹೆಗಡೆ, ಶಮಾ ಹೆಗಡೆ ಮತ್ತು ಅಭಿಷೇಕ್ ಮುರುಡೇಶ್ವರ ಇವರ ಪ್ರಾರ್ಥನಾ ಗೀತೆಯೊಂದಿಗೆ ಇಂದಿನ ಕಾರ್ಯಕ್ರಮ ಚಂದದ ಮುನ್ನುಡಿಯನ್ನು ಪಡೆಯಿತು. ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪೆÇ್ರೀ. ರವೀಂದ್ರ ನಾಯಕ್ ಇವರು ಪ್ರಾಸ್ತಾವಿಸಿದರು.
2006 ರಿಂದ ಹಿಡಿದು 2021 ರವರಿಗೆ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಇಂದು ಬೇರೆ ಬೇರೆ ಹುದ್ದೆಯಲ್ಲಿರುವ ಬಹಳಷ್ಟು ಹಿರಿಯ-ಕಿರಿಯ ವಿದ್ಯಾರ್ಥಿಗಳು ಶಾಲೆಯ ಪ್ರಾಂಗಣದಲ್ಲಿ ಸಂಭ್ರಮದಿಂದ ತಮ್ಮ ದಿನವನ್ನು ಕಳೆದದ್ದು ಅವರ ಮುಖದ ಪ್ರಸನ್ನತೆಯಲ್ಲೇ ಕಾಣುತ್ತಿತ್ತು. ಹಳೆ ವಿದ್ಯಾರ್ಥಿ ಸಂಘದ ಪಧಾಧಿಕಾರಿಗಳಾಗಿ ಡಾ. ವಿಶಾಖ ಇಸಳೂರು, ಡಾ. ನಂದನ ಭಟ್, ಮಹಿಮಾ ಗಾಯತ್ರಿ, ಪ್ರಜ್ಞಾ ಹೆಗಡೆ, ಕುಮಾರ. ಮನು ಹೆಗಡೆ, ಕುಮಾರ ಸಾತ್ವಿಕ್ ಹೆಗಡೆ, ಕು. ಅನಿಷ್ ದೇಶಪಾಂಡೆ ಈ ಏಳು ಜನ ಹಿರಿಯ ವಿದ್ಯಾರ್ಥಿಗಳನ್ನು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಇಂದು ಸಹಮತದಿಂದ ಘೋಷಿಸಲಾಯಿತು.
ಹಿರಿಯ ವಿದ್ಯಾರ್ಥಿಗಳು ತಮ್ಮ ನುಡಿಗಳಲ್ಲಿ ಎಷ್ಟೋ ಹಳೆಯ ನೆನಪುಗಳನ್ನು ಹಂಚಿಕೊಂಡರು. ಲಯನ್ ಎನ್.ವಿ.ಜಿ. ಭಟ್ ಇವರು ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಶಾಲೆಯ ಎಲ್ಲ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಹ ಶಿಕ್ಷಕಿಯರಾದ ಮುಕ್ತಾ ನಾಯ್ಕ ಮತ್ತು ಸೀತಾ ಭಟ್ ಇವರು ಕಾರ್ಯಕ್ರಮ ನಿರ್ವಹಿಸಿದರು.