ಶಿರಸಿ: ಆಯುರ್ವೇದ ಔಷಧ ಚಿಕಿತ್ಸೆ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಡಾ. ವೆಂಕಟ್ರಮಣ ಹೆಗಡೆ ನೇತೃತ್ವದ ವೇದ ಆರೋಗ್ಯ ಕೇಂದ್ರ ನಿಸರ್ಗ ಮನೆಯ ನೂತನ “ಧನ್ವಂತರಿ” ಕಟ್ಟಡ ಲೋಕಾರ್ಪಣೆಯಾಗಿದೆ.
ಶಿರಸಿಯ ನಿಸರ್ಗಮನೆಯಲ್ಲಿ ಶನಿವಾರ ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಕಟ್ಟಡ ಉದ್ಘಾಟಿಸಿದರು.
ಆಯುರ್ವೇದ ನಮ್ಮ ದೇಶ ವಿಶ್ವಕ್ಕೆ ನೀಡಿದ ಚಿಕಿತ್ಸಾಪದ್ಧತಿ. ಇಂದು ಧನ್ವಂತರಿ ಚಿಕಿತ್ಸೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಡಾ. ವೆಂಕಟ್ರಮಣ ಹೆಗಡೆ ಅವರ ವೇದ ಆರೋಗ್ಯ ಕೇಂದ್ರ ರಾಜ್ಯದೆಲ್ಲೆಡೆ ಮನೆಮಾತಾಗಿರುವುದು ಹೆಮ್ಮೆಯ ಸಂಗತಿ ಏಂದರು.
ಆಯುರ್ವೇದ ಚಿಕಿತ್ಸೆ, ಆಹಾರ ಪದ್ಧತಿ ಇವುಗಳ ಕುರಿತ ಸಮಘ್ರ ಮಾಹಿತಿ ಬಂಢಾರವೇ ಆಗಿರುವ ಡಾ. ವೆಂಕಟ್ರಮಣ ಹೆಗಡೆ ನಿಸರ್ಗ ವೇದ ಆರೋಗ್ಯ ಕೇಂದ್ರ ಇದೀಗ ಗ್ರಾಹಕರಿಗೆ ಸುಸಜ್ಜಿತ ವ್ಯವಸ್ಥೆ ಜೊತೆಗೆ ಉತ್ತಮ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಗೊಳಿಸಿರುದು ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಧನ್ವಂತರಿ ಮೂರ್ತಿ ನಿರ್ಮಿಸಿದ ಡಾ.ಟಿ.ಬಿ. ಸೊಲಬಕ್ಕನವರ ಹಾಗೂ ಅವರ ಪುತ್ರ ಹರ್ಷ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಚ್ಛ ನ್ಯಾಯಾಲಯದ ವಕೀಲ ಎಂ.ಎಸ್.ಭಾಗ್ವತ, ವಾನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮ ಹೆಗಡೆ, ಹುತ್ತಗಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಮಲತಾ ಮಡಿವಾಳ, ನಿಸರ್ಗ ಆಸ್ಪತ್ರೆಯ ಡಾ. ವೆಂಕಟ್ರಮಣ ಹೆಗಡೆ, ಡಾ. ಪ್ರವೀಣ ಜೇಕಬ್, ಕಟ್ಟಡ ನಿರ್ಮಿಸಿದ ಕೇರಳ ಇಂಜಿನಿಯರ್ ಆದ ನಿಕ್ಸನ್ ಥೊಮಸ್, ಡೊನಾಲ್ಡ್ ಥೊಮಸ್ ಇದ್ದರು.