ಶಿರಸಿ: ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಎರಡು ಮಹಾಚೇತನಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ ಅರ್ಥಗರ್ಭಿತವಾಗಿ ಆಚರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಮ್.ಜೆ.ಎಫ್. ಉದಯ ಸ್ವಾದಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ವಿನಯ್ ಹೆಗಡೆ, ಲಯನ್ಸ್ ಕ್ಲಬ್ ಕೋಶಾಧ್ಯಕ್ಷರು ಲ. ಅನಿತಾ ಶ್ರೀಕಾಂತ ಹೆಗಡೆ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ಸ್ ಎನ್. ವಿ. ಜಿ ಭಟ್, ಉಪಾಧ್ಯಕ್ಷರಾದ ಲ. ಪ್ರಭಾಕರ ಹೆಗಡೆ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಲಯನ್ಸ್ ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ, ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು, ಲಿಯೋ ಕ್ಲಬ್ ನ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲದೇ ಮುಖ್ಯ ಅತಿಥಿಯಾಗಿ ಪ್ರೋ. ಎಚ್. ಆರ್ ಅಮರನಾಥ್ ಅವರ ಉಪಸ್ಥಿತಿ ಇಂದಿನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತ್ತು. ಪ್ರೋ. ಎಚ್. ಆರ್ ಅಮರನಾಥ್ ಅವರು ಬರೆದ ಶ್ರವಣ ಎಂಬ ನಾಟಕವನ್ನು ಲಯನ್ಸ್ ಸದಸ್ಯರು ಮತ್ತು ಶಾಲಾ ಶಿಕ್ಷಕಿಯರು ಸೇರಿ ಅಭಿನಯಿಸಿದ್ದು ಕೂಡ ಇಂದಿನ ದಿನವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿತ್ತು.
ದೀಪಾ ಶಶಾಂಕ್ ರವರ ಜೊತೆಗೂಡಿ ಲಯನ್ಸ್ ಶಿಕ್ಷಕಿಯರ ಭಜನೆ ಕಾರ್ಯಕ್ರಮ ಮತ್ತು ರಮಾ ಪಟವರ್ಧನ್ ಅವರ ಜೊತೆಗೂಡಿ ಲಯನ್ಸ್ ಕ್ಲಬ್ ಸದಸ್ಯೆಯರ ಭಜನೆ ಕೂಡ ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ವಿಶೇಷತೆಯನ್ನು ನೀಡಿತ್ತು. ಅಲ್ಲದೆ ಸಭಾ ಕಾರ್ಯಕ್ರಮಕ್ಕೆ ಮೊದಲು ಸ್ಕೌಟ್ಸ್ & ಗೈಡ್ಸ್ ಮಕ್ಕಳು, ಸ್ಕೌಟ್ಸ್& ಗೈಡ್ಸ್ ತರಬೇತಿ ಶಿಕ್ಷಕರಾದ ಚೇತನಾ ಪಾವಸ್ಕರ್ ಮತ್ತು ರಾಘವೇಂದ್ರ ಹೊಸೂರು ಇವರ ಮಾರ್ಗದರ್ಶನದಲ್ಲಿ ಮಾದಕ ವಸ್ತುಗಳ ಬಳಕೆಯ ಕುರಿತಾದ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ರ್ಯಾಲಿಯನ್ನು ಹಮ್ಮಿಕೊಂಡಿದ್ದರು.