• first
  second
  third
  previous arrow
  next arrow
 • ದೇಶಕ್ಕೆ ಸ್ವಾತಂತ್ರ್ಯ ನೀಡುವಲ್ಲಿ ಮಹಾತ್ಮರ ಕೊಡುಗೆ ಅವಿಸ್ಮರಣೀಯ; ಸ್ಪೀಕರ್ ಕಾಗೇರಿ

  300x250 AD


  ಶಿರಸಿ: ಗಾಂಧಿ ಪುತ್ಥಳಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಿರಸಿ ನಗರಸಭೆ ವತಿಯಿಂದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.


  ನಗರದ ಬಿಡ್ಕಿಬೈಲಿನಲ್ಲಿ ಆಯೋಜಿಸಿದ್ಧ ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗಾಂಧಿ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ನೀಡುವಲ್ಲಿ ಬಲಿದಾನ ಮಾಡಿದ ಮಹಾತ್ಮರ ಕೊಡುಗೆ ಅವಿಸ್ಮರಣೀಯ. ಅಂಥವರ ಜೀವನವೇ ನಮಗೆಲ್ಲ ಮಾರ್ಗದರ್ಶನವಾಗಿದ್ದು, ಅವರು ನಡೆದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಲು ಮುಂದಾಗಬೇಕು ಎಂದರು.


  ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರಿಕರಿಗೆ ಸನ್ಮಾನ ನೆರವೇರಿಸಲಾಯಿತು. ಜತೆ, ತ್ಯಾಜ್ಯ ವಿಂಗಡನೆ ಮರುಬಳಕೆಯ ಕುರಿತು ನಡೆದ ಮಾದರಿಗಳ ಪ್ರದರ್ಶನದಲ್ಲಿ ಶಾಲಾ ಮಕ್ಕಳಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು. ನಂತರ ಹಳೆ ಬಸ್ ನಿಲ್ದಾಣ ಸಮೀಪ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

  300x250 AD


  ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಪೌರಯುಕ್ತ ಕೇಶವ ಚೌಗಲೆ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ, ತಹಸೀಲ್ದಾರ ಎಂ.ಆರ್.ಕುಲಕರ್ಣಿ ಹಾಗೂ ಇತರರು ಪಾಲ್ಗೊಂಡಿದ್ದರು

  Share This
  300x250 AD
  300x250 AD
  300x250 AD
  Back to top