ಸಿದ್ದಾಪುರ: ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಖಾತೆದಾರರು ಇ-ಖಾತಾ ಪಡೆಯಲು ನಿರಾಸಕ್ತಿ ತೋರುತ್ತಿದ್ದು ಇದರಿಂದ ನೀರಿಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಗುತ್ತಿಲ್ಲ.ಈಗಾಗಲೇ ಸರ್ಕಾರವು ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ನೀಡಲು ಆದೇಶ ನೀಡಿರುವ ಪ್ರಕಾರ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಕವಾದ ಪ್ರಚಾರವನ್ನು ಕೈಗೊಂಡು ಬಿ-ಖಾತಾವನ್ನು ನೀಡಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಖಾತೆದಾರರು ಕೇವಲ ಅರ್ಜಿ ಮಾತ್ರ ಸಲ್ಲಿಸಿ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಇ-ಖಾತಾವನ್ನು ನೀಡಲು ಸಾಧ್ಯವಾಗುತ್ತಿಲ್ಲ.ದೂರವಾಣಿ ಮೂಲಕ ಸಿಬ್ಬಂದಿಗಳು ಸಂಪರ್ಕಿಸಿದರೂ ಸಹ ಸಾರ್ವಜನಿಕರು ದಾಖಲಾತಿಗಳನ್ನು ಪೂರೈಸದೇ ಇರುವುದರಿಂದ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದ್ದು ಇದಕ್ಕೆ ಸಾರ್ವಜನಿಕರು ಸಹಕರಿಸಲು ಮುಖ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಇ-ಖಾತಾ ಪಡೆಯಲು ನಿರಾಸಕ್ತಿ: ಮನೆಮನೆಗೆ ತೆರಳಿ ದಾಖಲೆ ಸಂಗ್ರಹ
