ಶಿರಸಿ: ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘ ಚಿಪಗಿ ಇದರ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುಅ.1 ರಂದು ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ರೂಪಾ ಮಂಜುನಾಥ ಹೆಗಡೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗಣಪತಿ ಹೆಗಡೆ ಸೋಮನಳ್ಳಿ ಆಗಮಿಸಿದ್ದರು. ಮುಖ್ಯ ಕಾರ್ಯನಿರ್ವಾಹಕರಾದ ಶುಭಾ ಹೆಗಡೆ ಚಿಪಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ದಿವಾಕರ ಜೋಶಿ ಅವರು ಹಾಗೂ ಆಡಳಿತ ಮಂಡಳಿ ಸದಸ್ಯರು ಶೇರು ಸದಸ್ಯರು ಉಪಸ್ಥಿತರಿದ್ದರು.
ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘವು 2020-21ನೇ ಸಾಲಿನಲ್ಲಿ ಒಟ್ಟೂ 1,28,909 ಲೀಟರ್ ಹಾಲು ಸಂಗ್ರಹಿದ್ದು ಅದರ ಮೌಲ್ಯ 31,82,199.45 ರೂ ಗಳಾಗಿರುತ್ತದೆ. 2020-21 ನೇ ಸಾಲಿನಲ್ಲಿ ಸಂಘವು ಸ್ಥಳೀಯ ಹಾಲು ಮಾರಾಟ ಮತ್ತು ಧಾರವಾಡ ಹಾಲು ಒಕ್ಕೂಟಕ್ಕೆ ಒಟ್ಟೂ 38,72,586.37 ರೂ ಹಾಲು ಮಾರಾಟ ಮಾಡಿರುತ್ತದೆ. ಸಂಘವು 20-21ನೇ ಸಾಲಿನಲ್ಲಿ 5,89,870.72 ರೂ ವ್ಯಾಪಾರಿ ಲಾಭಗಳಿಸಿದ್ದು ನಿವ್ವಳ ಲಾಭ 2,92,567.27 ರೂ ಗಳಾಗಿರುತ್ತದೆ. ಲಾಭಾಂಶದಲ್ಲಿ ಸಂಘದ ಶೇರು ಸದಸ್ಯರಿಗೆ 20% ಶೇರು ಡಿವಿಡೆಂಟ್ ಘೋಷಿಸಿದ್ದು 2020-21ನೇ ಸಾಲಿನಲ್ಲಿ ಹಾಲು ಪೂರೈಸಿದ ಸದಸ್ಯರಿಗೆ ಪ್ರತಿ ಲೀಟರ್’ಗೆ 1ರೂ ನಂತೆ ಬೋನಸ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.