ಕುಮಟಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಗಿಬ್ ಹೈಸ್ಕೂಲ್ ಸಮೀಪದಲ್ಲಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯ ಸ್ಟೇರಿಂಗ್ ಲಾಕ್ ಆದ ಪರಿಣಾಮ ಉರುಳಿಬಿದ್ದ ಘಟನೆ ನಡೆದಿದೆ.
ಈ ಸಮಯದಲ್ಲಿ ಅಲ್ಲೇ ಬದಿಯಲ್ಲಿ ಸೈಕಲ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ಇಬ್ಬರು ಉರುಳಿ ಟಿಪ್ಪರ್ ಅಡಿಯಲ್ಲಿ ಸಿಲುಕಿದ್ದರು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಉರುಳುತ್ತಿರುವಾಗ ಸೈಕಲ್ ನಿಲ್ಲಿಸಿ ಮಾತನಾಡುತ್ತಿದ್ದ ಇಬ್ಬರೂ ಅಲ್ಲೇ ಮಲಗಿ, ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಟಿಪ್ಪರ್ ಉರುಳುತ್ತಿರುವಂತೆ ಅದರ ಚಕ್ರ ಹಾಗು ಇಂಜಿನ್ ನಡುವಿನ ಗ್ಯಾಪಿನಲ್ಲಿ ಉರುಳುತ್ತಾ ಕೆಳಗಿನ ಗಟಾರಕ್ಕೆ ಜಿಗಿದು, ಜೀವ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸಾರ್ವಜನಿಕರು ಇವರನ್ನು ಹೊರ ತೆಗೆದಿದ್ದಾರೆ.
ಟಿಪ್ಪರ್ ಉರುಳಿ ಮರಕ್ಕೆ ಬಡಿದು ನಿಂತಿದ್ದು, ಲಾರಿಯ ಚಾಲಕ ಸಹ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದ ಕುಮಟಾ ಪಿಎಸ್‍ಐ ಆನಂದ ಮೂರ್ತಿ ಮತ್ತು ಪೆÇಲೀಸರು ಸ್ಥಳಕ್ಕೆ ಆಗಮಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.