ಶಿರಸಿ: ನಗರದ ಜ್ಯುವೆಲರಿ ವಕ್ರ್ಸ್ ಅಂಗಡಿಗೆ ಗ್ರಾಹಕರಂತೆ ಬಂದು ಚಿನ್ನದ ಚೈನ್ ಕದ್ದು ಪರಾರಿಯಾಗಿದ್ದ ಪ್ರಕರಣ ಹಲವು ದಿನಗಳ ಹಿಂದೆ ಶಿರಸಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಇಂದು ಪೊಲೀಸರು ಯಶಸ್ವಿಯಾಗಿದ್ದಾರೆ.
‘ರತ್ನದೀಪ’ ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಸರ ಕದ್ದು, ಪರಾರಿಯಾದ ಕಳ್ಳರನ್ನು ಬೇಟೆಯಾಡಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದರು. ಅದಂತೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿತರಿಂದ ಅಂದಾಜು 53,130 ರೂಪಾಯಿ ಮೌಲ್ಯದ 11. 50 ಗ್ರಾಂ ಚೈನ್,49, 000 ಸಾವಿರ ಮೌಲ್ಯದ 22. 28 ಗ್ರಾಂ ಚಿನ್ನ ಒಟ್ಟು 1. 02. 672 ರೂಪಾಯಿ ಮಾಲ್ಯದ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ ಮಾರುತಿ ಸುಝುಕಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ನಿಲೇಶ ವಾಸುದೇವ ರೇವಣಕರ (32),ರಾಘವೇಂದ್ರ ಬಾಲಕೃಷ್ಣ ದೈವಜ್ಞ (35) ಬಂಧಿತ ಆರೋಪಿಗಳಾದ್ದು ಮುಂದಿನ ತನಿಖೆ ನಡೆಯಬೇಕಿದೆ.