• Slide
    Slide
    Slide
    previous arrow
    next arrow
  • ಫಲಾನುಭವಿಗಳಿಗೆ ಜಾನುವಾರು ವಿಮಾ ಚೆಕ್ ವಿತರಿಸಿದ ಸುರೇಶ್ಚಂದ್ರ ಕೆಶಿನ್ಮನೆ

    300x250 AD

    ಶಿರಸಿ: ಧಾರವಾಡ ಹಾಲು ಒಕ್ಕೂಟದ ವತಿಯಿಂದ ವಾದಿರಾಜ ಮಠ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಆಕಳು ಮರಣ ಹೊಂದಿದ ಕಾರಣ ಜಾನುವಾರು ವಿಮೆಯ ಅಡಿಯಲ್ಲಿ ರೂ.33,000ಗಳ ಮೊತ್ತದ ಚೆಕ್ಕನ್ನು ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಪರವಾಗಿ ವಾದಿರಾಜ ಮಠದ ವ್ಯವಸ್ಥಾಪಕರಾದ ರಾಧಾರಮಣ ಉಪಾಧ್ಯಾಯ ಅವರಿಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಹಾಗೂ ಧಾರವಾಡ ಹಾಲು ಒಕ್ಕೂಟದ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕ ಸುರೇಶ್ಚಂದ್ರ ಕೆ ಹೆಗಡೆ ಕೆಶಿನ್ಮನೆ ವಿತರಿಸಿದರು.


    ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ವತಿಯಿಂದ ಆಯಾ ಉಪವಿಭಾಗದ ವ್ಯಾಪ್ತಿಯ ಒಕ್ಕೂಟದಪಶು ವೈದ್ಯರ ಮೂಲಕ ಹಾಲು ಉತ್ಪಾದಕರ ಜಾನುವಾರುಗಳಿಗೆ ವಿಮಾ ಸೌಲಭವನ್ನು ಈಗಾಗಲೇ ಕಲ್ಪಿಸಿಕೊಟ್ಟಿದ್ದು, ಕೇವಲ ರೂ. 400ರಿಂದ 500ಗಳ ವಿಮಾ ಕಂತನ್ನು ಹಾಲು ಉತ್ಪಾದಕರುಪಾವತಿಸಿದ ಕಾರಣ, ಜಾನುವಾರು ವಿಮೆಯ ಅನುಕೂಲವನ್ನು ಹಾಲು ಉತ್ಪಾದಕರು ಪಡೆಯುವಂತಾಗಿದೆ ಎಂದರು. ಮುಂದಿನ ದಿನಗಳಲ್ಲಿ ಜಾನು ವಿಮಾ ಯೋಜನೆಗಳು ಬಂದತಂಹ ಸಂದರ್ಭದಲ್ಲಿ ಜಾನುವಾರು ವಿಮಾ ಯೋಜನೆಯನ್ನು ಜಿಲ್ಲೆ ಎಲ್ಲಾ ಹಾಲು ಉತ್ಪಾದಕ ರೈತರು ವಿಮಾ ಸೌಲಭ್ಯವನ್ನು ಪಡೆಯುಂತಾಗಬೇಕು ಎಂದು ಅವರು ಈ ಮೂಲಕ ಕರೆನೀಡಿದರು. ಹಾಗೂ ಭೈರುಂಬೆ ಹಾಲು ಉತ್ಪಾದಕರ ಸಹಕಾರಿ ಸಂಘದ ರಾಜೇಶ್ವರಿ ರಾ ಹೆಗಡೆ ಅವರಿಗೆ ರೂ.39,000/-ಗಳ ಮೊತ್ತದ ಚೆಕ್’ನ್ನು ಮತ್ತು ಚಿಕ್ಕ ಬೆಂಗಳೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಪನಾ ಕೆ ನಾಯ್ಕ ಅವರಿಗೆರೂ. 32,000/-ಗಳ ಮೊತ್ತದ ಚೆಕ್’ನ್ನು ಫಲಾನುಭವಿಗಳ ಜಾನುವಾರು ಮರಣ ಹೊಂದಿದ ಕಾರಣ ಅವರು ವಿತರಿಸಿದರು.

    300x250 AD


    ಈ ಸಂದರ್ಭದಲ್ಲಿ ಭೈರುಂಬೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯಾದ ಮಂಜುನಾಥ ಎನ್ ಹೆಗಡೆ, ಜಾನುವಾರು ವಿಮಾ ಫಲಾನುಭವಿಯಾದ ರಾಜೇಶ್ವರಿ ರಾ ಹೆಗಡೆ, ಹಾಲು ಪರೀಕ್ಷಕರಾದ ಗಣೇಶ ಹೆಗಡೆ ಹಾಗೂ ವಾದಿರಾಜ ಮಠದ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ದತ್ತಾತ್ರೇಯ ಗಜಾನನ ಹೆಗಡೆ, ವಾದಿರಾಜ ಮಠದ ವ್ಯವಸ್ಥಾಪಕರಾದ ರಾಧಾರಮಣ ಉಪಾಧ್ಯಾಯ, ವಾದಿರಾಜ ಮಠ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲುಪರೀಕ್ಷಕರಾದ ಮಧುಕರ ಹೆಗಡೆ ಹಾಗೂ ಪಶು ವೈದ್ಯಾಧಿಕಾರಿಗಳಾದ ಡಾ. ರಾಕೇಶ ತಲ್ಲೂರ್ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top