ಅಂಕೋಲಾ: ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಪಟ್ಟಣದ ವಿವಿಧಡೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಶ್ರಮದಾನ ನಡೆಸಿದರು. ಇಲ್ಲಿನ ಕೆ.ಸಿ ರಸ್ತೆ, ತಾಲೂಕಾ ಆರೋಗ್ಯಾಧಿಕಾರಿ ಕಚೇರಿ, ತಾಲೂಕು ಆಸ್ಪತ್ರೆ ಮೊದಲಾದ ಕಡೆ ಸ್ವಚ್ಛತಾ ಕೆಲಸ ನಿರ್ವಹಿಸಲಾಯಿತು. ಕೆ.ಸಿ ರಸ್ತೆಯ ಅಂಚಿನಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಸ್ವಚ್ಛ ಮಾಡಲಾಯಿತು. ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ.ಮಹೇಂದ್ರ ನಾಯಕ ಸ್ವಚ್ಛತೆಯ ಸಂದೇಶ ನೀಡಿದರು.
ಆರೋಗ್ಯಾಧಿಕಾರಿ ಡಾ.ನಿತೀನ್ ಹೊಸ್ಮೆಲ್ಕರ್, ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನ ಪ್ರಾಚಾರ್ಯರಾದ ಶಂಕರ ಗೌಡ ಕಡೆಮನಿ, ಕಾರ್ಯನಿರ್ವಾಹಕರಾದ ಗುರುದತ್ತ ಬಿ ನಾಯಕ, ಸಿಬ್ಬಂದಿ ವಿಕೇಶ ನಾಯ್ಕ ,ರಶ್ಮಿ ನಾಯಕ, ನಯನಾ ತಾಂಡೆಲ್, ರಂಜನಾ ನಾಯ್ಕ, ಶೋಭಾ ಗೌಡ, ನಾಸಿರ ಖಾನ್, ಪ್ರಕಾಶ ಮೊದಲಾದವರು ಭಾಗವಹಿಸಿದ್ದರು.