ಶಿರಸಿ: ಅಕ್ಟೋಬರ್ 2 ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛಭಾರತ್ ಕ್ಲೀನ್ ಇಂಡಿಯಾ ಕಾರ್ಯಕ್ರಮ ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಮುಂಜಾನೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಹಾಗೂ ನೆಹರು ಯುವ ಕೇಂದ್ರ ಕಾರವಾರ ಮತ್ತು ಎಕ್ಸಲೆಂಟ್ ಸ್ಪೋರ್ಟ್ಸ್ ಕ್ಲಬ್ ಶಿರಸಿ, ರಾಥೋಡ್ ಮಾರ್ಷಲ್ ಆರ್ಟ್ಸ್ ಇವರ ಸಂಯುಕ್ತಾಶ್ರಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಜಿಲ್ಲಾ ಕ್ರೀಡಾಂಗಣ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಕ್ರೀಡಾಧಿಕಾರಿ ಕಿರಣ ನಾಯ್ಕ, ಎಕ್ಸಲೆಂಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ನಿಲೇಕಣಿ, ನಿಖಿಲ್ ಶೆಟ್ಟಿ, ಮುಸ್ತಫಾ ಹಾಗೂ ಯುವ ಸ್ಪಂದನ ಸಂಚಾಲಕರು ಸ್ಟೀವನ್, ರೋಟರಿಯನ್ ಪ್ರವೀಣ್ ಕಾಮತ್, ಮಾರ್ಷಲ್ ಆರ್ಟ್ಸ್ ತರಬೇತಿದಾರರಾದ ಆನಂದ ನಾಯ್ಕ, ಕ್ರೀಡಾಂಗಣ ಸಿಬ್ಬಂದಿ ಚಂದ್ರು ಮೊಗೇರ್ ಇವರೆಲ್ಲರ ಸಹಕಾರದಿಂದ ಕ್ರೀಡಾಂಗಣದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು.