ಮುಂಡಗೋಡ: ತಾಲೂಕಿನ ಅಧಿಕಾರಿಗಳ ತಂಡದ ಪರಿಶ್ರಮದಿಂದ ಶೇ.90 ರಷ್ಟು ಜನ ವ್ಯಾಕ್ಸಿನೇಷನಿಗೆ ಒಳಪಟ್ಟಿದ್ದಾರೆ. ಉಳಿದವರಿಗೆ ಕೈ ಮುಗಿದು ಕೇಳಿ ಕೊಳ್ಳುತ್ತೇನೆ ಜಾತಿ-ಬೇಧ ಬಿಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕರೆ ನೀಡಿದರು.
ಅವರು ತಾಲೂಕು ಆಸ್ಪತ್ರೆಯಲ್ಲಿ ಕರ್ಮಾ ಫೌಂಡೇಷನ್, ಮಕ್ಕಳ ಬೆಡ್ ಆಕ್ಸಿಜನ್ ಮತ್ತು ಆರೋಗ್ಯ ಸಾಮಗ್ರಿಗಳನ್ನು, ಕೊವೀಡ ಲಸಿಕಾ ಕೇಂದ್ರ ಘಟಕ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಸರ್ಕಾರಿ ಆಸ್ಪತ್ರೆ ಎಂಬುದು ಬಡವರ ದೇವಸ್ಥಾನ ಇದ್ದ ಹಾಗೆ ಜಿಲ್ಲೆಯಲ್ಲಿಯೇ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಕೋವಿಡ್ ಟೆಸ್ಟ್ ಲ್ಯಾಬ್ ಮೊದಲು ಕಾರವಾರದಲ್ಲಿ ಮಾತ್ರ ಇತ್ತು. ಈಗ ಶಿರಸಿಯಲ್ಲಿಯೂ ಆರಂಭಿಸಲಾಗುವುದು. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದ ಅವರ ಮೊದಲನೇ ಕೊವೀಡ ಅಲೆಯಲ್ಲಿ ಯಾವುದೇ ಮನ್ನೆಚ್ಚರಿಕೆ ಇರಲಿಲ್ಲ. ಆದರೆ ಬರುವ ಮೂರನೇ ಅಲೆಯನ್ನು ಎದುರಿಸಲು ಕೇಂದ್ರ, ರಾಜ್ಯ ಸರ್ಕಾರ ಸಿದ್ಧವಾಗಿದೆ. ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡವರೆ ಚಿಕಿತ್ಸೆಗೆ ಬರುತ್ತಾರೆ. ತಾಲೂಕಿನ ಆಸ್ಪತ್ರೆ ಜಿಲ್ಲೆಯಲ್ಲಿಯೇ ಅತ್ಯಾಧುನಿಕ ವ್ಯವಸ್ಥೆ ಬೆಡ್ ಹೊಂದಿರುವುದು ಮುಂಡಗೋಡ ಸರ್ಕಾರಿ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ರೀತಿಯಾದ ವ್ಯವಸ್ಥೆ ಇದ್ದರೆ ಇದೇ ಬಡವರಿಗೆ ಅನುಕೂಲವಾಗುತ್ತದೆ. ಎಂದರು.
ಈ ಹಿಂದೆ ಸರ್ಕಾರಿ ಆಸ್ಪತ್ರೆ ಎಂದರೆ ಜನರಲ್ಲಿ ಕೀಳಿರಿಮೆ ಇತ್ತು. ಇಂದಿನ ದಿನದಲ್ಲಿ ಯಲ್ಲಾಪುರ ಮತ್ತು ಮುಂಡಗೋಡ ತಾಲೂಕಾ ಆಸ್ಪತ್ರೆ ಯಾವ ಆಸ್ಪತ್ರೆಗೂ ಕಮ್ಮಿ ಇಲ್ಲದಂತಿದೆ. ಜನರಲ್ಲಿ ವಿಶ್ವಾಸ ಮೂಡಿ ಸರ್ಕಾರಿ ಆಸ್ಪತೆಗೆ ಬರುತ್ತಿದ್ದಾರೆ. ಈ ಬಡವರ ದೇವಸ್ಥಾನದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಕೆಲಸ ಮಾಡಬೇಕು ಎಂದರು. ಪಟ್ಟಣದಲ್ಲಿ ಚಿಕ್ಕ ಮಕ್ಕಳ ಆಸ್ಪತ್ರೆ ಮಾಡಲು ಯೋಜನೆ ರೂಪಿಸಿದ್ದೇವೆ. ಇಲ್ಲಿನ ಹಳೆಯ ಆಸ್ಪತ್ರೆಯನ್ನು ನೆಲಸಮ ಮಾಡಲು ಅಧಿಕಾರಿಗೆ ಸೂಚಿಸಿದ್ದೇನೆ. ನಂತರ ಈ ಸ್ಥಳದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸುತ್ತೇವೆ ಎಂದರು.
ಕರ್ಮಾ ಫೌಂಡೇಶನ್ ಅತ್ಯಾಧುನಿಕ ಬೆಡ್‍ಗಳನ್ನು ನೀಡಿದ್ದಾರೆ. ಅದರಂತೆ ತಾಲೂಕಿನ ದಾನಿಗಳು ದೇಣಿಗೆ ನೀಡಿ ಲಸಿಕಾ ಕೊಠಡಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇವರನ್ನು ಈ ಸಂದರ್ಭದಲ್ಲಿ ಅಭಿನಂಧಿಸಿ ಸನ್ಮಾನಿಸಿದರು.
ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್ .ಪಾಟೀಲ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೆ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ವೈದ್ಯರು ಹಾಗೂ ನಮಗೆ ಕಲಿಸಿದ ಗುರುಗಳು ಮೊದಲು ಅವರನ್ನು ಸ್ಮರಿಸಬೇಕು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ನೆನೆಯಬೇಕು ಎಂದರು.
ಎಲ್.ಟಿ ಪಾಟೀಲ್, ತಹಶೀಲ್ದಾರ ಶ್ರೀಧರ ಮುಂದಲಮನಿ, ಡಾ.ಎಚ್.ಎಫ್.ಇಂಗಳೆ ಮಾತನಾಡಿದರು. ನಂತರ ಜಿಲ್ಲಾ ಉಸ್ತವಾರಿ ಸಚಿವರು ಆಸ್ಪತ್ರೆಯ ಚಿಕ್ಕ ಮಕ್ಕಳ ವಾರ್ಡಿಗೆ ತೆರಳಿ ಮಕ್ಕಳ ಆರೋಗ್ಯ ವಿಚಾರಿಸದರು. ಹಿರಿಯ ಬೌದ್ಧ ಸನ್ಯಾಸಿಗಳು ಮಕ್ಕಳು ಶೀಘ್ರ ಚೇತರಿಕೆ ಆಗಲೇಂದು ಆಶೀರ್ವದಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಶರದ್ ನಾಯಕ್, ತಹಶೀಲ್ದಾರ್ ಶ್ರೀಧರ ಮುಂದಲಮನಿ, ಡಾ.ಎಚ್.ಎಫ್.ಇಂಗಳೆ, ಮುಖ್ಯಾಧಿಕಾರಿ ಸಂಗನಬಸಯ್ಯ, ಕರ್ಮಾ ಫೌಂಡೇಷನ್ ಅಧ್ಯಕ್ಷ ಚಂಪಾ ಕಲ್ಚಾಂಗ್, ಟಿಬೆಟಿಯನ್ ಹಿರಿಯ ಬೌದ್ಧ ಸನ್ಯಾಸಿಗಳು, ಪ್ರಮುಖರಾದ ರವಿಗೌಡ ಪಾಟೀಲ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಶೇಖರ ಲಮಾಣಿ ಸೇರಿದಂತೆ ಮುಂತಾದವರಿದ್ದರು