• Slide
    Slide
    Slide
    previous arrow
    next arrow
  • ಆಶ್ರಯ ಮನೆ ಬಿಲ್ ಪಾವತಿಗೆ ಹಣ ಪಡೆದು ವಂಚನೆ; ಸಿಬ್ಬಂದಿ ವರ್ಗಾವಣೆಗೆ ಸಚಿವ ಹೆಬ್ಬಾರ್’ಗೆ ಮನವಿ

    300x250 AD

    ಮುಂಡಗೋಡ: ಪಟ್ಟಣ ಪಂಚಾಯಿತ ಆಶ್ರಯ ಮನೆ ಬಿಲ್ ಪಾವತಿಸಲು ಹಣ ತೆಗೆದುಕೊಂಡ ಪ.ಪಂ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ಶುಕ್ರವಾರ ಇಲ್ಲಿನ ತಾಲೂಕು ಆಸ್ಪತ್ರೆ ಆವರಣದಲ್ಲಿ ನೊಂದ ಕೆಲ ಫಲಾನುಭವಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರಿಗೆ ಮನವಿ ಸಲ್ಲಿಸಿದರು.
    ಪ.ಪಂ.ಯಲ್ಲಿ ಕರ್ತವ್ಯ ನಿರ್ವಹಿಸುವ ಮಂಚಲಾ ಶೇಟ್ ಸಿಬ್ಬಂದಿ ನಮ್ಮ ಮನೆ ಬಿಲ್ಲುಗಳನ್ನು ಮಾಡಿಕೊಡುವುದಾವಾಗಿ 3000, 2000 ರಂತ ಹಣ ಪಡೆದು ವಂಚಿಸಿದ್ದಾರೆ. ಈ ವರೆಗೂ ಮನೆಯ ಬಿಲ್ಲುಗಳ ಜಿ.ಪಿ.ಎಸ್ ಸಹ ಸರಿಯಾಗಿ ಮಾಡಿರುವುದಿಲ್ಲ. ಸಾರ್ವಜನಿಕರಿಗೆ ಫೆÇೀನ ಮುಖಾಂತರ ಕರೆ ಮಾಡಿ ನಾನೇ ಬಿಲ್ಲು ಮಾಡಿಕೊಡುವುದಾಗಿ ನಂಬಿಸಿದ್ದಾರೆ. ಹಣ ನೀಡದಿದ್ದರೆ ಬಿಲ್ ಮಾಡುವುದಿಲ್ಲ ಎಂದು ಹೆದರಿಸಿ ಹಣ ಪಡೆದಿದ್ದಾರೆ. ನೀವು ಹೀಗೆ ಹೆದರಿಸಿದರೆ ನಾವು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ, ಸಚಿವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ನಿಮ್ಮ ವಿರುದ್ಧ ದೂರು ನೀಡುತ್ತೇವೆ ಎಂದು ಹೇಳದರೇ ಯಾರಲ್ಲಿ ಬೇಕಾದರೂ ಹೇಳಕೊಳ್ಳಿ ನಾನು ಜಿ.ಪಿ.ಎಸ್ ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾರೆ. ಆಗ ನಾವು ಹೆದರಿ ಹಣ ನೀಡಿರುತ್ತೇವೆ.

    ಇವರು ಸುಮಾರು ವರ್ಷಗಳಿಂದ ಇಲ್ಲಯೇ ಕೆಲಸ ನಿರ್ವಹಿಸುತ್ತಿದ್ದು ಕೆಲಸಕ್ಕೆ ಸೇರಿದ್ದಾಗಿನಿಂದಲೂ ಮುಂಡಗೋಡ ಪಟ್ಟಣ ಪಂಚಾಯಿತಿದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಪ.ಪಂ ಮುಖ್ಯಾಧಿಕಾರಿಗೆ ಮೌಖಿಕವಾಗಿ ದೂರು ನೀಡಿದ್ದೇವು. ಆದರೆ ಅದೇ ರಾತ್ರಿ ನಮಗೆಲ್ಲ ಫೆÇೀನು ಮಾಡಿ ನೀವು ನನ್ನ ಮೇಲೆ ಆರೋಪಿ ಮಾಡಿದ್ದೀರಿ. ನಿಮ್ಮ ಬಿಲ್ಲುಗಳನ್ನು ಹೇಗೆ ಮಾಡಿಸಿಕೊಳ್ಳುತ್ತೀರಿ ಎಂದು ನಾನು ನೋಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಇವರ ವರ್ತನೆಯು ಸಾರ್ವಜನಿಕರಿಗೆ ತೊಂದರೆ ನೀಡುವುದೇ ಇವರ ಕೆಲಸವಾಗಿದ್ದು, ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು ಇವರನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ನೊಂದ ಫಲಾನುಭವಿಗಳು ಸಚಿವರಿಗೆ ನೀಡಿದ ಮನವಿಯಲ್ಲಿ ಆರೋಪಿಸಿದ್ದಾರೆ.

    300x250 AD


    ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಆಶ್ರಯ ಯೋಜನೆಯಲ್ಲಿ ಯಾರಿಗೂ ನಯಾ ಪೈಸೆ ಹಣ ನೀಡಬೇಡಿ ಎಂದು ನೂರಾರು ಬಾರಿ ಕೈ ಮುಗಿದ ಹೇಳಿದ್ದೇವೆ ಎಂದಾಗ, ಮಹಿಳಾ ಫಲಾನುಭವಿಯೊಬ್ಬರು ದುಡ್ದು ಕೊಡದಿದ್ದರೆ ಏನು ಕೆಲಸ ಮಾಡುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇಂತಹ ವಿಷಯವನ್ನು ನನ್ನ ಗಮನಕ್ಕೆ ತನ್ನಿ ಎಂದು ಸಚಿವರು ಹೇಳಿದರು.


    ಈ ಫಲಾನುಭವಿಗಳು ಪ.ಪಂ. ಮುಖ್ಯಾಧಿಕಾರಿಗಳಿಗೆ ಸೆ. 13 ರಂದು ಸಂಬಂಧಿಸಿದಂತೆ ವಿಷಯವನ್ನು ತಂದಿದ್ದರು. ಅಲ್ಲದೇ ಸೆ.20 ರಂದು ಪೌರಾಡಳಿತ ಸಚಿವರಿಗೆ, ಜಿಲ್ಲಾ ಉಸ್ತವಾರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮುಖ್ಯಾಧಿಕಾರಿಗೆ ಮನವಿ ನೀಡಿದ್ದರು. ಪುಮಣ್ಣಾ ಲಮಾಣಿ, ಸುಶೀಲಾ ಲಮಾಣಿ, ಮಂಜು ಲಮಾಣ, ರಾಘು ಲಮಾಣಿ, ಜಕ್ಕವ್ವ ಲಮಾಣಿ, ರಾಜು ಲಮಾಣಿ, ಸೇರಿದಂತೆ ಮುಂತಾದವರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top