ಶಿರಸಿ: ರಾಜಿ ಸಂಧಾನಕ್ಕೆ ಯೋಗ್ಯ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಲೋಕ ಅದಾಲತ್ ಇಲ್ಲಿನ ನ್ಯಾಯಾಲಯದಲ್ಲಿ ಗುರುವಾರ ಸಂಜೆವರೆಗೂ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಕಮಲಾಕ್ಷ ಹಾಗೂ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಜು ಶೇಡ್ವಾಲ್ಕರ್ ರಾಜಿ ಯೋಗ್ಯ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು. ಶಿರಸಿಯ 5 ನ್ಯಾಯಾಲಯಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಬಾಕಿ ಉಳಿದ ಒಟ್ಟೂ 6177 ಪ್ರಕರಣಗಳಲ್ಲಿ 1520 ಪ್ರಕರಣಗಳನ್ನು ಕೈಗೆತ್ತಿಕೊಂಡು 1083 ಪ್ರಕರಣಗಳನ್ನು ಬಗೆಹರಿಸಲಾಯಿತು. ಈ ಎಲ್ಲ ಪ್ರಕರಣಗಳಿಂದ ಒಟ್ಟೂ 1,78, 68,418 ರೂ. ಹಣ ರಾಜಿ ವಸೂಲಿಯಾಗುವ ಮುಖೇನ ಸಂಧಾನದ ಮೂಲಕ ಬಗೆಹರಿಸಲಾಗಿದೆ.
ಮಧ್ಯಾಹ್ನ 1ಗಂಟೆಯಿಂದ ಸಂಜೆವರೆಗೆ ನಡೆದ ಲೋಕ ಅದಾಲತ್‍ನಲ್ಲಿ ಮೂಲ ದಾವಾ, ಕ್ರಿಮಿನಲ್ ಪ್ರಕರಣಗಳು ಹಾಗೂ ಕರ್ನಾಟಕ ಪೆÇಲೀಸ್ ಕಾಯಿದೆಯ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ, ಪ್ರಿಲಿಟಿಗೇಶನ್ ಸೇರಿದಂತೆ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು ಎಂದು ಶಿರಸಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಈರೇಶ ತಿಳಿಸಿದರು.
ಈ ಹಿಂದೆ ಕಳೆದ ಬಾರಿಯ ಅದಾಲತ್‍ನಲ್ಲಿ 1658 ಪ್ರಕರಣದಲ್ಲಿ 1093 ಪ್ರಕರಣಗಳು ಇತ್ಯರ್ಥಗೊಳಿಸಲಾಗಿತ್ತು. ಅತಿ ಕಡಿಮೆ ಖರ್ಚಿನಲ್ಲಿ ನ್ಯಾಯಾಲಯದಲ್ಲಿ ಕಾಲ ವಿಳಂಬವಾಗದೇ ಕಡಿಮೆ ಅವಧಿಯಲ್ಲಿ ಪ್ರಕರಣಗಳ ಇತ್ಯರ್ಥವಾಗುವ ಲೋಕಾದಾಲತ್‍ನಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.