• Slide
    Slide
    Slide
    previous arrow
    next arrow
  • ಎಂ.ಎಂ ಕಾಲೇಜಿನಲ್ಲಿ ’ನೀರು ಮತ್ತು ಶಕ್ತಿ’ ವಿಶೇಷ ಉಪನ್ಯಾಸ

    300x250 AD

    ಶಿರಸಿ: ಶಿರಸಿಯ ಎಂ. ಎಂ. ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ಅ.1 ರಂದು ಕಾಲೇಜು ಪ್ರಾರಂಭೋತ್ಸವದ ಬಿ.ಎಸ್ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸವೊಂದನ್ನು ಆಯೋಜಿಸಿತ್ತು. ಅಂತರಾಷ್ಟ್ರೀಯ ಮಟ್ಟದ ಭಾಗವಾಗಿ ವಿಜ್ಞಾನಿಗಳಲ್ಲೊಬ್ಬರಾದ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ, ಮಹದೇವಪ್ಪ ವಾಯ್ ಕರಿದುರಗನವರ ಇವರು ’ನೀರು ಮತ್ತು ಶಕ್ತಿ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.

    ತಮ್ಮ ಹಲವು ದಶಕಗಳ ಸಂಶೋಧನೆಯನ್ನು ಆಧರಿಸಿ ಮಾತನಾಡಿದ ಪ್ರೊ.ಕರಿದುರಗನವರ ಅವರು ಪ್ರಾರಂಭದಲ್ಲಿ ಕನಾಟಕ ವಿಶ್ವವಿದ್ಯಾಲಯದ ವಿಶೇಷತೆ, ಸಂಶೋಧನೆಯಲ್ಲಿ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗಗಳ ಕೊಡುಗೆ ಮತ್ತು ರಾಷ್ಟ್ರಮಟ್ಟದಲ್ಲಿ ವಿಶ್ವವಿದ್ಯಾಲಯದ ಸ್ಥಾನ ಇವುಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ನಂತರ, ನೀರು ಮತ್ತು ಅದರ ಪ್ರಾಮುಖ್ಯತೆ, ಶೇಕಡಾವಾರು ಲಭ್ಯತೆ ಇವುಗಳ ಕುರಿತು ವಿವರಿಸಿ, ನೀರಿನ ವೈಜ್ಞಾನಿಕ ಅಂಶಗಳಾದ ರಾಸಾಯನಿಕ ರಚನೆ, ದ್ರವ ರೂಪದಲ್ಲಿ ನೀರು ಲಭ್ಯವಾಗಲು ಕಾರಣ ಮೊದಲಾದವುಗಳನ್ನು ಚರ್ಚಿಸಿದರು. ನೀರಿನ ಸಂರಕ್ಷಣೆಯ ಕುರಿತು ತಿಳಿಸುತ್ತಾ ಸಮುದ್ರದ ನೀರನ್ನು ಅಥವಾ ಗಡಸು ನೀರನ್ನು ಶುದ್ದೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಬಹುದಾದ ವಿಧಾನಗಳಾದ ಡಿಸ್ಯಾಲಿನೇಷನ್, ರಿವರ್ಸ ಆಸ್ಸಾಸಿಸ್, ಎಲೆಕ್ಟ್ ಡಯಾಲಿಸಿಸ್, ಮೊದಲಾದವುಗಳ ಕುರಿತು ಪ್ರಸ್ತಾಪಿಸುತ್ತಾ, ಎಲೆಕೊಡಯಾಲಿಸಿಸ್ ಕ್ಷೇತ್ರದಲ್ಲಿ ತಮ್ಮ ಸಂಶೋಧನೆಯನ್ನು ಹಂಚಿಕೊಂಡರು. ತಮ್ಮ ಸಂಶೋಧನೆಯಿಂದ ಲಭ್ಯವಾದ ಯುನೈಟೆಡ್ ಸ್ಟೇಟ್ ಪೇಟೆಂಟ್ ಕುರಿತು ಹಾಗೂ ಅದು ಮೊದಲ ರಾಂಕ್ ಪಡೆದ ಕುರಿತು ತಿಳಿಸಿದರು.

    300x250 AD

    ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾ ಮೆಕ್ ಡರ್ಮೆಡ್ ಅವರು ಧಾರವಾಡದ ರಸಾಯನಶಾಸ್ತ್ರ ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಜೊತೆ ಚರ್ಚಿಸಿದ ಹಲವು ವೈಜ್ಞಾನಿಕ ಸವಾಲುಗಳನ್ನು ತಮ್ಮ ಸಂಶೋಧನೆಯಲ್ಲಿ ಮುಂದುವರೆಸಿ ಯಶಸ್ವಿಯಾದ ಕುರಿತು ಮಾತನಾಡಿದರು. ಜೊತೆಗೆ ಶಕ್ತಿಯ ಉತ್ಪತ್ತಿ ಹಾಗೂ ಸಂಗ್ರಹಣೆ ಈ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಯ ಕುರಿತು ಪ್ರಸ್ತಾಪಿಸಿದ ಅವರು ಮೊಬೈಲ್, ಎಲೆಕ್ಟಿಕಲ್ ಕಾರು ಮೊದಲಾದವುಗಳಲ್ಲಿ ಇತ್ತೀಚೆಗೆ ಬಳಕೆಯಾಗುತ್ತಿರುವ ತಂತ್ರಜ್ಞಾನಗಳಾದ ತೂಲ್ ಸೆಲ್, ಸಾವರ್ ಕಾಪಾಸಿಟರ್ ಇವಗಳ ಬಗ್ಗೆ ಚರ್ಚಿಸಿದರು. ಈ ವಿಷಯದಲ್ಲಿ ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಮೂಲಕ ನಡೆದ ಆವಿಷ್ಕಾರಗಳು, ಅಂತರಾಷ್ಟ್ರೀಯ ಲೇಖನಗಳಲ್ಲಿ ಮುದ್ರಣಗೊಂಡ ತಮ್ಮ ಸಂಶೋಧನೆ ಇವುಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಸಂಶೋಧನೆಯ ಕುರಿತು ಮಾಹಿತಿ ನೀಡಿದರು. ಸುಜಲ್-2001 ಎಂಬ ಎಲೆಕೊಡಯಾಲಿಸಿಸ್ ತಂತ್ರಜ್ಞಾನದ ಇಚ್ಛೆ ಕುಡಿಯುವ ನೀರಿನ ಘಟಕವನ್ನು ಧಾರವಾಡದಲ್ಲಿ ಮೊದಲಬಾರಿಗೆ 2000ನೇ ಇಸವಿಯಲ್ಲಿ ಸ್ಥಾಪಿಸಿದನ್ನು ಉಲ್ಲೇಖಿಸಿದರು. ಉಪನ್ಯಾಸಕರ ಪ್ರಶ್ನೆಗೆ ಉತ್ತರಿಸುತ್ತಾ, ಪ್ಲಾಸ್ಟಿಕ್ ತ್ಯಾಜ್ಯ ಎಲೆಕ್ಟ್ರಾನಿಕ್ ತ್ಯಾಜ್ಯ ಮೊದಲಾದವುಗಳನ್ನು ಮರುಉಪಯೋಗಿ ವಸ್ತುಗಳ ತಯಾರಿಕೆಗೆ ಬಳಸಿಕೊಳ್ಳುವುದು ಮತ್ತು ಅದಕ್ಕಿರುವ ಸವಾಲುಗಳನ್ನು ವಿವರಿಸಿದರು. ತಮ್ಮ ನಿವಾಸದ ಮೂಲಕ ರಸಾಯನಶಾಸ್ತ್ರ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಜೊತೆಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದರು.


    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕೋಮಲಾ ಭಟ್ ಅವರು ಪ್ರೊ. ಕರಿದುರಗನವರ ಅವರನ್ನು ಅಭಿನಂದಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗಣೇಶ ಎಸ್. ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಡಾ. ಸತೀಶಕುಮಾರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಡಾ. ದಿವ್ಯಾ ಹೆಗಡೆ ವಂದಿಸಿದರು. ಅಧ್ಯಾಪಕವರ್ಗ ಹಾಗೂ ಸುಮಾರು 100 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.

    Share This
    300x250 AD
    300x250 AD
    300x250 AD
    Leaderboard Ad
    Back to top