ಶಿರಸಿ: ಭಾರತೀಯ ವೈದ್ಯಕೀಯ ಸಂಘ ಶಿರಸಿಯ 2021-2022 ನೇ ಸಾಲಿಗೆ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಡಾ.ರಾಮ ಹೆಗಡೆ ಆಯ್ಕೆಯಾಗಿದ್ದಾರೆ.
ಗೌರವ ಕಾರ್ಯದರ್ಶಿಯಾಗಿ ಡಾ.ರವೀಂದ್ರ ಕೊಳ್ವೇಕರ್, ಖಜಾಂಜಿಯಾಗಿ ಡಾ.ವಿಶ್ವನಾಥ ಅಂಕದ್, ಉಪಾಧ್ಯಕ್ಷರಾಗಿ ಡಾ.ವಿನಾಯಕ ತೆಂಬದ್ಮನೆ, ಜಂಟಿ ಕಾರ್ಯದರ್ಶಿಯಾಗಿ ಡಾ.ವಿನಾಯಕ ಎಸ್, ಕೇಂದ್ರ ಸಮಿತಿ ಸದಸ್ಯರಾಗಿ ಡಾ.ಜಿ ಎಂ ಹೆಗಡೆ, ರಾಜ್ಯ ಸಮಿತಿ ಸದಸ್ಯರಾಗಿ ಡಾ.ಡಿ ಎಂ ಹೆಗಡೆ ಮತ್ತು ಡಾ.ರಾಘವೇಂದ್ರ ಭಟ್ ಆಯ್ಕೆಯಾಗಿದ್ದಾರೆ.