• Slide
    Slide
    Slide
    previous arrow
    next arrow
  • ಹುಲೇಕಲ್ ಕಾಲೇಜಿನಲ್ಲಿ ‘ಸೇವೆ ಮತ್ತು ಸಮರ್ಪಣೆ’ ಅಭಿಯಾನದಡಿ ರಸಪ್ರಶ್ನೆ ಸ್ಪರ್ಧೆ

    300x250 AD

    ಶಿರಸಿ: ತಾಲೂಕಿನ ಶ್ರೀದೇವಿ ಸಂಯುಕ್ತ ಪದವಿಪೂರ್ವ ಕಾಲೇಜಿನ ‘ಶ್ರೀದೇವಿ ಭವನ’ದಲ್ಲಿ, ಪ್ರಧಾನಿ ನರೇಂದ್ರ ಮೋದಿಜಿಯವರ 71ನೇ ಹುಟ್ಟು ಹಬ್ಬದ ನಿಮಿತ್ತ, ಅ.1 ಶುಕ್ರವಾರ ‘ಸೇವೆ ಮತ್ತು ಸಮರ್ಪಣೆ’ ಅಭಿಯಾನದ ಅಡಿಯಲ್ಲಿ ಯುವಕ ಮತ್ತು ಯುವತಿಯರಿಗಾಗಿ ವಿಧಾನಸಭಾ ಮಟ್ಟದ ‘ರಸಪ್ರಶ್ನೆ’ ಸ್ಪರ್ಧೆ ನಡೆಸಲಾಯಿತು.

    ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮಾನಸ ಎಮ್ ಹೆಗಡೆ, ದ್ವಿತೀಯ ಅಂಕಿತ ನಾಯ್ಕ್ ಮತ್ತು ತೃತೀಯ ವಿಜೇತಾ ವಿ ಪ್ರಭು ಹಾಗೂ ಚರಣಕುಮಾರ್ ಸಿ ಪೂಜಾರಿ ಪಡೆದುಕೊಂಡರು.

    300x250 AD


    ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ನರಸಿಂಹ ಹೆಗಡೆ ಬಕ್ಕಳ, ಪ್ರಾಚಾರ್ಯ ಡಿ.ಆರ್ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ಆಡಳಿತ ಮಂಡಳಿ ಸದಸ್ಯ ಎಮ್.ವಿ ಹೆಗಡೆ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ವಸಂತ್ ಭಟ್, ಸತೀಶ ಹೆಗಡೆ ಸಾಲ್ಕಣಿ, ಪ್ರಸನ್ನ ಹೆಗಡೆ ಮತ್ತು ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿರಿದ್ದರು. ಸುಮಾರು 80ಕ್ಕೂ ಹೆಚ್ಚು ಯುವಕ, ಯುವತಿಯರು ಭಾಗವಹಿಸಿದ್ದರು.


    ಯುವ ಮೋರ್ಚಾ ಗ್ರಾಮೀಣ ಮಂಡಲದ ಅಧ್ಯಕ್ಷ ಸಚಿನ್ ಭಟ್ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬಿಜೆಪಿ ಒಬಿಸಿ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷ ಸತೀಶ ನಾಯ್ಕ್ ಔಢಾಳ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top