ಭಟ್ಕಳ: ತಾಲೂಕಿನ ಕಟ್ಟೇವೀರ ಕಬಡ್ಡಿ ತಂಡವನ್ನು ಪ್ರತಿನಿಧಿಸುತ್ತಿದ್ದ ಯುವ ಕ್ರೀಡಾಪಟು ವಿನೋದ ನಾಯ್ಕ, ಈ ಸಾಲಿನ ಪ್ರೋ ಕಬಡ್ಡಿ – 8 ರಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಘಟಾನುಘಟಿ ಕಬಡ್ಡಿ ಆಟಗಾರರನ್ನು ಹುಟ್ಟು ಹಾಕಿರುವ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಯು ಪ್ರತಿಭೆಯೊಂದು ಪ್ರೋ ಕಬಡ್ಡಿ ಛಾಂಪಿಯನ್ ಷಿಪ್ ಗೆ ಆಯ್ಕೆಯಾಗಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.
ಈತನ ಸಾಧನೆಗೆ ಕ್ಷೇತ್ರದ ಶಾಸಕ ಸುನೀಲ ನಾಯ್ಕ, ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.