ಯಲ್ಲಾಪುರ: ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಸರರ್ಕಾರದ ಮಟ್ಟದಲ್ಲಿ ಇಲಾಖೆಯ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ,ಕೇರಳದ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಲಾಗುತ್ತಿದೆ.30 ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮನ್ನು ಆಯ್ಕೆ ಮಾಡಿದ್ದು, 10 ಜಿಲ್ಲೆಗಳ ತರಬೇತಿ ಪೂರೈಸಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ವಿಕೇಂದ್ರೀಕರಣ ಸಮಿತಿ ಪ್ರಸ್ತುತ ಪಡಿಸಿದ ಜನಪರ ಯೋಜನೆಯನ್ನು ಘೋಷಿಸಿದ್ದಾರೆ. ಅಲ್ಲದೇ 16 ಅಮೃತ ಯೋಜನೆಗಳಲ್ಲಿ 13 ಪಂಚಾಯತ ರಾಜ್ ಇಲಾಖೆಗೆ ಸಂಬoಧಿಸಿದ್ದಾಗಿದೆ. ಪಂಚಾಯತಗಳು ಇನ್ನು ಮುಂದೆ ಗ್ರಾಮ ಸರಕಾರಗಳಾಗಿದೆ. ಅಮೃತ ಮಹೋತ್ಸವ ವರ್ಷದಿಂದ ದೂರದೃಷ್ಠಿ ಜನಪರ ಯೋಜನೆಗಳು. ಗೃಂಥಾಲಯಗಳನ್ನು ಜ್ಞಾನವರ್ಜನ ಕೇಂದ್ರವನ್ನಾಗಿಸಬೇಕು. ಅಂಗನವಾಡಿ ಸುಧಾರಣೆ ಮೇಲ್ವಿಚಾರಣೆ, ಪಶುಚಿಕಿತ್ಸಾ ಕೇಂದ್ರಗಳ ಬಲವರ್ಧನೆ, ವಿಕಲಚೇತನ, ಮಕ್ಕಳ ಮಹಿಳಾ ಗ್ರಾಮ ಸಭೆಗಳನ್ನು ಮಾಡಿ ಆಯವ್ಯಯ ರಚಿಸುವುದು. ಎಸ್. ಸಿ. ಎಸ್. ಟಿ ಕಲ್ಯಾಣ ಕಾರ್ಯಕ್ರಮಗಳ ಆಯವ್ಯಯ, ರಾಜ್ಯದ 28000 ಕೆರೆಗಳ ನಿರ್ಮಾಣ, ನಿರ್ವಹಣೆ ಪಂಚಾಯತಗಳಿಗೆ ವಹಿಸಿಕೊಡುವುದು. ತಹಶಿಲ್ದಾರರನ್ನು ಪಂಚಾಯತ ರಾಜ ವ್ಯವಸ್ಥೆಯಲ್ಲಿ ತೊಡಗಿಕೊಳ್ಳಲು ಆದೇಶ ಕಡ್ಡಾಯವಾಗಿದೆ. ಜವಬ್ದಾರಿ, ಜನನ ಮರಣ, ವಿವಾಹ ನೊಂದಣಿ, ಪಿಂಚಣಿ, ಮಾಶಾಸನಗಳು ಪಂಚಾಯತ ವ್ಯಾಪ್ತಿಗೆ ಬರಲಿದೆ. ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗ್ರಾಮ ಪಂಚಾಯತ ನಿರ್ವಹಣೆಗೆ ಬರಲಿದೆ ಎಂದರು.
ಜವಬ್ದಾರಿ, ಜನನ ಮರಣ, ವಿವಾಹ ನೊಂದಣಿ, ಪಿಂಚಣಿ, ಮಾಶಾಸನಗಳು ಪಂಚಾಯತ ವ್ಯಾಪ್ತಿಗೆ ಬರಲಿದೆ. ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗ್ರಾಮ ಪಂಚಾಯತ ನಿರ್ವಹಣೆಗೆ ಬರಲಿದೆ ಎಂದರು. ಕಳೆದ ವರ್ಷ ಸಮಿತಿಯು 15 ಸಭೆ ನಡೆಸಿ ಠರಾವುಗಳ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದು, ಅದು ಅಂಗಿಕಾರವಾಗಿ ಆದೇಶವಾಗಿದೆ. ನಮ್ಮೂರಿನ ಸಮುದಾಯದ ಬಗ್ಗೆ ನಾವೇ ಪಾಲ್ಗೊಂಡು ಸಿದ್ದಪಡಿಸಿದ ನಕ್ಷೆ ಇದಾಗಿದೆ. ಇದನ್ನು ಮೂರು ರೀತಿಯ ನಕ್ಷೆಗಳಾಗಿ ವಿಂಗಡಿಸಲಾಗಿದೆ. ಮಾನವ ಸಂಪನ್ಮೂಲ ನಕ್ಷೆ, ಸಾಮಾಜಿಕ ಅಭಿವೃದ್ಧಿ ನಕ್ಷೆ, ನೈಸರ್ಗಿಕ ಸಂಪನ್ಮೂಲ ನಕ್ಷೆ. ನಮ್ಮ ಊರು ಕಾಲ ಕಾಲಕ್ಕೆ ಹೊಸ ರೂಪ ಪಡೆಯಬೇಕು. ಊರು ಕಟ್ಟುವ ಕೆಲಸದಲ್ಲಿ ಗ್ರಾಮದ ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಗ್ರಾಮದ ಪ್ರತಿಭೆಯನ್ನು ಗುರುತಿಸಬೇಕು ಎಂದರು.