ಶಿರಸಿ: ಕೇಂದ್ರ ಸರಕಾರದ ‘ಶ್ರಮಯೋಗಿ ಮನ್ಧನ್’ ಯೋಜನೆಯ ಮೂಲಕ ಹೈನುಗಾರರಿಗೆ ಪಿಂಚಣಿ ಯೋಜನೆ ಘೋಷಿಸಿದ್ದು, ಸೆ.27 ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ರಾಜ್ಯದ ಎಲ್ಲ ಹಾಲು ಒಕ್ಕೂಟಗಳಿಗೆ ಈ ಮೂಲಕ ಯೋಜನೆ ಅನುಷ್ಠಾನಗೊಳಿಸಲು ತಿಳಿಸಿದೆ. ಅಂತೆಯೇ ರಾಜ್ಯದ ಎಲ್ಲ ಒಕ್ಕೂಟಗಳು ಆಸಕ್ತಿ ಹೊಂದಿದ ಹೈನುಗಾರರಿಗೆ ಯೋಜನೆ ಮಾಹಿತಿ ನೀಡಿ ಯೋಜನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಹಾಗೂ ಧಾರವಾಡ ಹಾಲು ಒಕ್ಕೂಟದ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿ ನಿರ್ದೇಶಕ ಸುರೇಶ್ಚಂದ್ರ ಕೆ ಹೆಗಡೆ ಕೆಶಿನ್ಮನೆ ತಿಳಿಸಿದರು.
ಯೋಜನೆಯ ಬಗ್ಗೆ ಅವರು ಮಾಹಿತಿ ನೀಡುತ್ತಾ, 18-40 ವಯೋಮಾನದ ಹೈನುಗಾರರು ಪಿಂಚಣಿ ಯೋಜನೆಗೆ ಒಳಪಡುತ್ತಾರೆ. 40 ವಯೋಮಾನ ದಾಟಿದ ಹೈನುಗಾರರು 40 ವಯೋಮಾನದೊಳಗಿನ ತಮ್ಮ ಕುಟುಂಬದಲ್ಲಿರುವ ಇತರ ಸದಸ್ಯನ್ನು ಈ ಯೋಜನೆಗೆ ಸೇರ್ಪಡೆ ಮಾಡಬಹುದಾಗಿದೆ. 18 ವರ್ಷದ ವ್ಯಕ್ತಿ ಪ್ರತೀ ತಿಂಗಳು ರೂ.55 ಗಳನ್ನು 60 ವಯೋಮಾನದವರೆಗೆ ಎಲ್‍ಐಸಿಗೆ ತಾನು ನೇರವಾಗಿ ತನ್ನ ಖಾತೆಯ ಮೂಲಕ ಪಾವತಿಸಬೇಕು. ಇದಕ್ಕೆ ಪೂರಕಾಗಿ ಕೇಂದ್ರ ಸರಕಾರ ಪ್ರತೀ ತಿಂಗಳು ರೂ.55ಗಳನ್ನು ವ್ಯಕ್ತಿಯ ಎಲ್‍ಐಸಿ ಖಾತೆಗೆ ಜಮಾ ಮಾಡುತ್ತದೆ.
18-40 ವಯೋಮಾನದವರು ಪಾವತಿಸ ಬೇಕಾದ ಕಂತಿನ ಮೊತ್ತ ಹೀಗಿದೆ: 19ನೇ ವಯಸ್ಸಿನವರು ಪ್ರತೀ 132 ತಿಂಗಳು ರೂ.58., 21ನೇ ವಯಸ್ಸಿನವರು ಪ್ರತೀ ತಿಂಗಳು ರೂ.64.,22ನೇ ವಯಸ್ಸಿನವರು ಪ್ರತೀ ತಿಂಗಳು ರೂ.68., 23ನೇ ವಯಸ್ಸಿನವರು ಪ್ರತೀ ತಿಂಗಳು ರೂ.72.,24ನೇ ವಯಸ್ಸಿನವರು ಪ್ರತೀ ತಿಂಗಳು ರೂ.76., 25ನೇ ವಯಸ್ಸಿನವರು ಪ್ರತೀ ತಿಂಗಳು ರೂ.80., 26ನೇವಯಸ್ಸಿನವರು ಪ್ರತೀ ತಿಂಗಳು ರೂ.85., 27ನೇವಯಸ್ಸಿನವರುಪ್ರತೀ ತಿಂಗಳು ರೂ.90., 28ನೇ ವಯಸ್ಸಿನವರು ಪ್ರತೀ ತಿಂಗಳು ರೂ.95., 29ನೇ ವಯಸ್ಸಿನವರು ಪ್ರತೀ ತಿಂಗಳು ರೂ.100., 30ನೇ ವಯಸ್ಸಿನವರು ಪ್ರತೀ ತಿಂಗಳು ರೂ.105., 31ನೇ ವಯಸ್ಸಿನವರು ಪ್ರತೀ ತಿಂಗಳು ರೂ.110., 32ನೇ ವಯಸ್ಸಿನವರು ಪ್ರತೀ ತಿಂಗಳು ರೂ.120., 33ನೇ ವಯಸ್ಸಿನವರು ಪ್ರತೀ ತಿಂಗಳು ರೂ.130., 34ನೇವಯಸ್ಸಿನವರು ಪ್ರತೀ ತಿಂಗಳು ರೂ.140., 35ನೇ ವಯಸ್ಸಿನವರು ಪ್ರತೀ ತಿಂಗಳು ರೂ.150., 36ನೇ ವಯಸ್ಸಿನವರು ಪ್ರತೀ ತಿಂಗಳು ರೂ.160., 37ನೇವಯಸ್ಸಿನವರುಪ್ರತೀ ತಿಂಗಳು ರೂ.170., 38ನೇ ವಯಸ್ಸಿನವರು ಪ್ರತೀ ತಿಂಗಳು ರೂ.180., 39ನೇ ವಯಸ್ಸಿನವರು ಪ್ರತೀ ತಿಂಗಳು ರೂ.190.,ಹಾಗೂ 40ನೇ ವಯಸ್ಸಿನವರು ಪ್ರತೀ ತಿಂಗಳು ರೂ.200.,ಗಳನ್ನು ತನ್ನ 60ನೇ ವಯೋಮಾನದವರೆಗೆ ಕ್ರಮವಾಗಿ ಪಾವತಿಸಬೇಕು ಎಂದರು.
ಹೈನುಗಾರನು ತನ್ನ 60ನೇ ವಯೋಮಾನದವರೆಗೆ ಪಿಂಚಣಿ ಯೋಜನೆಯ ಕಂತನ್ನು ಪಾವತಿಸಿದ ನಂತರ ತನ್ನ 61ನೇ ವಯೋಮನದಿಂದ ತಾನು ಮರಣ ಹೊಂದುವವರೆಗೆಪ್ರತೀ ತಿಂಗಳು ರೂ.3000 ದಂತೆ ತನ್ನ ಖಾತೆಗೆ ಹಣವನ್ನು ಪಡೆಯುತ್ತಾನೆ. ಪಿಂಚಣಿ ಯೋಜನೆಯನ್ನು ಮಾಡಿಸುವ ಹೈನುಗಾರರು ವಾರಸುದಾರರ ಹೆಸರನ್ನು ಸೂಚಿಸಬೇಕು. ಹೈನುಗಾರನು ಈ ಯೋಜನೆಯನ್ನು ಪ್ರಾರಂಭಗೊಳಿಸಿದ ನಂತರ ಸತತವಾಗಿ ಕನಿಷ್ಠ 10 ವರ್ಷಗಳವರೆಗಾದರೂ ಸಹ ಯೋಜನೆಯ ಕಂತಿನ ಹಣವನ್ನು ಪಾವತಿಸಬೇಕು. 10 ವರ್ಷಗಳ ನಂತರ ಹೈನುಗಾರನು ಇಚ್ಛಿಸಿದ್ದಲ್ಲಿ ಯೋಜನೆಯನ್ನು ನಿಷ್ಕ್ರಿಯಗೊಳಿಸಬಹುದಾಗಿದೆ. ಪಾವತಿಸಿದ ಕಂತಿನ ಮೊತ್ತದ ಮೇಲೆ ಉಳಿತಾಯ ಖಾತೆಯ ಬಡ್ಡಿಯ ದರದಂತೆ ಎಲ್‍ಐಸಿಯು ಹಣವನ್ನು ಹೈನುಗಾರನಿಗೆ ಪಾವತಿಸುತ್ತದೆ.
ಒಂದು ವೇಳೆ ಕನಿಷ್ಠ 10ವರ್ಷಗಳ ಒಳಗೆ ಯೋಜನೆಯ ಕಂತಿನ ಹಣ ಪಾವತಿಸಲು ಹೈನುಗಾರನು ವಿಫಲನಾದರೆ ಯಾವುದೇ ರೀತಿಯ ಹಣ ದೊರಕುವುದಿಲ್ಲ. ಸತತವಾಗಿ ಕನಿಷ್ಠ 5 ವರ್ಷಗಳ ವರೆಗೆ ಕಂತಿನ ಹಣಪಾವತಿಸಿದ ನಂತರ ಹೈನುಗಾರರನು ಮರಣ ಹೊಂದಿದರೆ ಅವನ ವಾರಸುದಾರನಿಗೆ ಪ್ರತೀ ತಿಂಗಳು ರೂ.1500ನಂತೆ ಪಿಂಚಣಿಯ ಜೀವಿತ ಅವಧಿಯವರಗೆ ದೊರೆಯಲಿದೆ. ಹೈನುಗಾರನ ವಾರಸುದಾರ ಒಂದು ವೇಳೆ ಯೋಜನೆಯ ಕಂತನ್ನು ಪಾವತಿಸಲು ಇಚ್ಛಿಸಿದಲ್ಲಿ ಯೋಜನೆಯನ್ನು ಮುಂದುವರೆಸಬಹುದಾಗಿದೆ. ಹಾಗೂ ಇಲ್ಲಿಯ ತನಕ ಹೈನುಗಾರನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೂಲಕ ಬ್ಯಾಂಕ್ ಮತ್ತು ಸಂಘ-ಸಂಸ್ಥೆಗಳ ಮೂಲಕ ಯಾವುದೇ ರೀತಿಯ ಪಿಂಚಣಿಯ ಯೋಜನೆಯ ಅಡಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿದ್ದರೆ ಅಥವಾ ಅಂತಹ ಪಿಂಚಣಿ ಯೋಜನೆಯ ಫಲಾನುಭವಿಯಾಗಿದ್ದರೆ ‘ಶ್ರಮಯೋಗಿ ಮನ್ಧನ್’ ಯೋಜನೆಗೆ ಅಂತಹ ಹೈನುಗಾರನು ಅನರ್ಹನಾಗಿರುತ್ತಾನೆ. ಆಸಕ್ತ ಅರ್ಹ ಹೈನುಗಾರರರು ತಮ್ಮ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಲಾಭವನ್ನು ಪಡೆಯಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.