ಶಿರಸಿ: ತಾಲೂಕಿನ ಕಲಗಾರ ಬಳಿ ಅಕ್ರಮ ಕೋಣದ ಮಾಂಸ ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹಚ್ಚಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳ ಸಮೇತ 90 ಕೆಜಿ ಕೋಣದ ಮಾಂಸ ವಶಕ್ಕೆ ಪಡೆದಿದ್ದಾರೆ.
ಕಲಗಾರ ಬಳಿ ಮನೆಯ ಹಿಂಬದಿಯ ಕೊಠಡಿಯಲ್ಲಿ ಅಕ್ರಮವಾಗಿ ಕೋಣದ ಮಾಂಸ ಸಂಗ್ರಹಿಸಿಡಲಾಗಿತ್ತು. ಈ ಮಾಹಿತಿ ತಿಳಿದ ಸಿಪಿಐ ರಾಮಚಂದ್ರ ನಾಯಕ ನೇತೃತ್ವದ ಗ್ರಾಮೀಣ ಠಾಣೆ ಪಿಎಸ್‍ಐ ಈರಯ್ಯ ದಾಳಿ ನಡೆಸಿ, 90 ಕೆಜಿ ಕೋಣದ ಮಾಂಸದ ಜೊತೆಗೆ ಇದರಲ್ಲಿ ಭಾಗಿಯಾದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.