ಕಾರವಾರ : ಲೊರೋನಾ ಲಾಕ್ಡೌನ್ ಆದ ಬಳಿಕ ಮಹಾರಾಷ್ಟ್ರದಲ್ಲಿ ಕೊರೋನಾ ಮೂರನೇ ಅಲೆ ಹಾಗೂ ಡೆಲ್ಟಾ ಪ್ಲಸ್ ಸೋಂಕಿನ ಭೀತಿಯಿಂದ ಗೋವಾ ಮಾರ್ಗವಾಗಿ ಬರುವವರಿಗೆ ಕರ್ನಾಟಕ ಗಡಿಯಲ್ಲಿ ಆರ್. ಟಿ. ಪಿ. ಸಿ. ಆರ್. ನೆಗೆಟಿವ್ ವರದಿ ಕಡ್ಡಾಯವಾಗಿತ್ತು, ಕಾರವಾರದಿಂದ ಗೋವಾಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ಗೋವಾ ಗಡಿ ಪೋಳೆಂನಲ್ಲಿ ತಪಾಸಣೆ ನಡೆಸಿ ಕರ್ನಾಟಕ ಪ್ರವೇಶ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು.
ಆದರೆ ಈಗ ಗಡಿ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದ್ದು ಕೊರೊನಾ ಲಸಿಕೆಯ ಎರಡು ಡೋಸ್ ಪಡೆದವರಿಗೆ ಕರ್ನಾಟದರಿಂದ ಗೋವಾ, ಗೋವಾದಿಂದ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.ಲಸಿಕೆ ಪಡೆದಿರುವ ದಾಖಲೆಗಳನ್ನು ಪರೀಕ್ಷೆ ಮಾಡಿದ ಬಳಿಕ ಪ್ರವೇಶಕ್ಕೆ ಅವಕಾಶವಿದೆ. ಅದರಂತೆ ಗೋವಾದಿಂದ ಕಾರವಾರ ಗಡಿಗೆ ಪ್ರವೇಶ ಮಾಡುವ ಸಂದರ್ಭದಲ್ಲೂ ಇದೇ ಕ್ರಮಕೈಗೊಳ್ಳಲಾಗುತ್ತಿದೆ.