ಕಾರವಾರ : ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 2021-22ನೇ ಸಾಲಿಗೆ ಅಗತ್ಯವಾದ ವಿದ್ಯಾರ್ಥಿ ಬಸ್ ಪಾಸ್‌ಗಳ ದಾಸ್ತಾನು ಲಭ್ಯವಿದ್ದು, ವಿದ್ಯಾರ್ಥಿಗಳು ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಸಂಬoಧಪಟ್ಟ ಪಾಸ್ ಕೌಂಟರ್ ಗಳಿಂದ ಬಸ್ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳು ಈ ಕೂಡಲೇ ಸೇವಾ ಸಿಂಧು ಆನ್‌ಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಸಂಬoಧಪಟ್ಟ ಸಂಸ್ಥೆಯ ಪಾಸ್ ಕೌಂಟರ್‌ಗಳಿoದ ಬಸ್ ಪಾಸ್ ಪಡೆದುಕೊಳ್ಳಬಹುದಾಗಿದೆ.
ಅಲ್ಲದೇ 2020-21ನೇ ಸಾಲಿನಲ್ಲಿ ಪ್ರವೇಶ ಪಡೆದುತರಗತಿ/ಪರೀಕ್ಷೆ ಬಾಕಿ ಇರುವಎಲ್ಲಾ ವರ್ಗದ ಪದವಿ /ಡಿಪ್ಲೋಮಾ/ ಐ. ಟಿ. ಐ/ ಸಂಜೆ ಕಾಲೇಜು/ ಸ್ನಾತಕೋತ್ತರ/ ವೃತ್ತಿಪರ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕಕ್ಕೆ ಅಂತ್ಯಗೊಳ್ಳುವoತೆ ಗರಿಷ್ಠ ನವೆಂಬರ್-2021ರವರೆಗೆ ಸಂಸ್ಥೆಗೆ ಸಂಬoಧಪಟ್ಟ ಪಾಸ್ ಕೌಂಟರ್‌ಗಳಿoದ ಸಹಿ ಹಾಗೂ ಮೊಹರು ಪಡೆದುಕೊಂಡು ಉಚಿತವಾಗಿ ತರಗತಿ ಹಾಗೂ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿದೆ.
ಈ ಸೌಲಭ್ಯದ ಸದುಪಯೋಗವನ್ನು ವಿದ್ಯಾರ್ಥಿಗಳಿಗಳು ಪಡೆದುಕೊಳ್ಳುವ ಮೂಲಕ ಎಲ್ಲಾ ವಿದ್ಯಾರ್ಥಿ ಸಂಘಟನೆ, ಶಾಲಾ/ಕಾಲೇಜು ಆಡಳಿತ ಮಂಡಳಿಗಳಿಗಳು ಸಂಸ್ಥೆಯ ಜೊತೆಗೆ ಸಹಕರಿಸಬೇಕೆಂದು ವಾ. ಕ. ರ. ಸಾ. ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.