• Slide
    Slide
    Slide
    previous arrow
    next arrow
  • ಶಂಕರ್ ನಾಗ್ ಅಭಿಮಾನಿ ಬಳಗದಿಂದ ಅವರ ಪುಣ್ಯ ಸ್ಮರಣೆ; ಭಾವಚಿತ್ರಕ್ಕೆ ಪುಷ್ಪ ನಮನ

    300x250 AD


    ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಕನ್ನಡ ಸಿನಿಮಾ ರಂಗದ ಖ್ಯಾತ ನಟ, ಮರೆಯದ ಮಾಣಿಕ್ಯ ಶಂಕರ್ ನಾಗ್ ಅವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಶಂಕರ್ ನಾಗ್ ಅಭಿಮಾನಿ ಬಳಗ (ರಿ) ದಿಂದ ಬಳಗದ ಕಚೇರಿಯಲ್ಲಿ ಸೆ.30 ರಂದು ಶಂಕರ್ ನಾಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು.


    ಈ ಸಂದರ್ಭದಲ್ಲಿ ಶ್ರೀ ಭಂಡೂರೇಶ್ವರಿ ದೇವಿ ದೇವಾಲಯ, ಶ್ರೀ ಕ್ಷೇತ್ರ ಭಂಡೂರಿನ ಧರ್ಮದರ್ಶಿ ಪ್ರಶಾಂತರವರ ನೇತೃತ್ವದಲ್ಲಿ ಸಭೆ ನಡೆಯಿತು. ಶಂಕರ್ ನಾಗ್ ಅವರ ಹುಟ್ಟುರಾದ ಹೊನ್ನಾವರದಲ್ಲಿ ಅವರ ಪ್ರತಿಮೆ ನಿರ್ಮಾಣ ಆಗಬೇಕು ಮತ್ತು ಅವರ ಹೆಸರಿನಲ್ಲಿ ಅವರ ಜೀವನ ಚರಿತ್ರೆ ಕಾಣುವಂತಹ ಪಾರ್ಕ್ ಸಹ ಮುಂದಿನ ದಿನಗಳಲ್ಲಿ ಆಗಬೇಕು ಎಂದು ತಿಳಿಸಿದರು.


    ಶಂಕರ್ ನಾಗ್ ಅವರ ಪ್ರತಿಮೆ ನಿರ್ಮಿಸಲು ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಸಹ ಮಾಡುತ್ತೆವೆ ಹಾಗೂ ಹೊನ್ನಾವರದಿಂದ ಬೆಂಗಳೂರಿಗೆ ಬೈಕ್ ರ್ಯಾಲಿ ಮುಖಾಂತರ ಹೋಗಿ ಅಲ್ಲಿ ಕಾರ್ಯಕ್ರಮವನ್ನು ಮಾಡಿ ಪ್ರತಿಮೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇವೆ. ಅನೇಕ ಕನ್ನಡ ಪರ ಸಂಘಟನೆಗಳು ಮತ್ತು ಶಂಕರ್ ನಾಗ್ ಅಭಿಮಾನಿಗಳು ಜೊತೆಯಾಗಿದ್ದಾರೆ ಅಂದರು.

    300x250 AD


    ಹಾಗೆ ಈ ಸಂದರ್ಭದಲ್ಲಿ ಶ್ರೀರಾಮ್ ಜಾದುಗರ್ ಮಾತನಾಡಿ ಶಂಕರ್ ನಾಗ್ ಅವರು ನಡೆದು ಬಂದ ಜೀವನದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸಿದರು. ಹಾಗೂ ಹಲವಾರು ಶಂಕರ್ ನಾಗ್ ಅಭಿಮಾನಿಗಳು ಭಾಗಿಯಾಗಿ ಹೊನ್ನಾವರದಲ್ಲಿ ಶಂಕರ್ ನಾಗ್ ಪ್ರತಿಮೆ ನಿರ್ಮಾಣಕ್ಕೆ ನಾವು ಜೊತೆಯಾಗುವುದಾಗಿ ತಿಳಿಸಿ ಇದಕ್ಕಾಗಿ ಎಂಥಾ ಹೋರಾಟಕ್ಕೂ ಸಿದ್ದರೆಂದು ತಿಳಿಸಿದರು. ಬೇರೆ ಬೇರೆ ಕಲಾ ಕ್ಷೇತ್ರದ ಅನೇಕ ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.

    Share This
    300x250 AD
    300x250 AD
    300x250 AD
    Leaderboard Ad
    Back to top