ಶಿರಸಿ: ತಾಲೂಕಿನಲ್ಲಿ ಅ.1 ಶುಕ್ರವಾರ 410 ಡೋಸ್ ಕೊರೊನಾ ವ್ಯಾಕ್ಸಿನ್ ಲಭ್ಯವಿದ್ದು, ಪ್ರಥಮ ಮತ್ತು ದ್ವತೀಯ ಡೋಸ್ ಪಡೆದುಕೊಳ್ಳುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 410 ಡೋಸ್ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ 50, ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ 100, ದಾಸನಕೊಪ್ಪ-ಬಂಕನಾಳದಲ್ಲಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಹೆಗಡೆಕಟ್ಟಾದಲ್ಲಿ 50, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್’ನಲ್ಲಿ 40, ಕಕ್ಕಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 20, ಸಾಲ್ಕಣಿ ಪ್ರಾಥಮಿಕ ಆರೋಗ್ಯ ಕೇಂದ್ರ 50 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಯಲ್ಲಾಪುರದಲ್ಲಿ 200 ಡೋಸ್ ಲಸಿಕೆ ಲಭ್ಯವಿದ್ದು, ತಾಲೂಕಾಸ್ಪತ್ರೆಯಲ್ಲಿ ನೀಡುತ್ತಾರೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.