ಕಾರವಾರ: ನಗರಸಭೆ ಪೌರಾಯುಕ್ತರ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರ, ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಮತ್ತು ಡಾ. ಹರ್ಷ ಅವರ ಸಮ್ಮುಖದಲ್ಲಿ ಮಳೆಯಲ್ಲೇ ನಡೆದು ಗುಡ್ಡೆಹಳ್ಳಿಯ ಜನರಿಗೆ ಆರೋಗ್ಯಾಧಿಕಾರಿಗಳ ತಂಡ ಲಸಿಕೆಯನ್ನು ನೀಡಿದೆ.
ಡಾ.ಹರ್ಷ ಅವರು ವಯಸ್ಕರಿಗೆ ಮತ್ತು ಮಕ್ಕಳಿಗೆ ತಪಾಸಣೆ ಮಾಡಿದರು.ಅನಾರೋಗ್ಯವಾದರೆ ತುರ್ತು ಪರಿಸ್ಥಿಯಲ್ಲಿ ಅನುಕೂಲವಾಗುವಂತೆ ಅಂಗನವಾಡಿ ಕೇಂದ್ರದಲ್ಲಿ ಔಷಧಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಈ ವೇಳೆ ಹಾಜರಿದ್ದ ವಾರ್ಡ್ ಸದಸ್ಯೆ ರುಕ್ಕಿಣಿ ಗೌಡ ಆರೋಗ್ಯಾಧಿಕಾರಿಗಳ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸುಧಾಕರ್ ಗೌಡ, ವಿಲಾಸಿನಿ ನಾಯ್ಕ, ಎಸ್.ಎಸ್.ಗಡಕರ್,ಶಾರದಾ ಗೌಡ, ಜ್ಯೋತಿ ನಾಯ್ಕ, ಪಲ್ಲವಿ ನಾಯ್ಕ, ಶೀತಲ್ ಹಾಗೂ ಊರಿನ ಪ್ರಮುಖರು ಇದ್ದರು.