• Slide
    Slide
    Slide
    previous arrow
    next arrow
  • ಹಿರಿಯ ಚುಟುಕು ಕವಿ ಗಣೇಶ ಹೆಗಡೆ ವಿಧಿವಶ

    300x250 AD

    ಶಿರಸಿ: ಹಿರಿಯ ಚುಟುಕು ಕವಿ, ಓಣಿಕೇರಿಯ ನಿವೃತ್ತ ಪ್ರೌಢಶಾಲಾ ಶಿಕ್ಷಕ ಗಣೇಶ ವೆಂ ಹೆಗಡೆ, ಓಣಿಕೇರಿ (79) ಗುರುವಾರ ಬೆಳಗಿನ ಜಾವ ವಿಧಿವಶರಾದರು.

    ಜಿ.ವಿ.ಹೆಗಡೆ ಎಂದೇ‌ ಪ್ರಸಿದ್ದರಾಗಿದ್ದ ಅವರು  ಪ್ರೇರಣೆ ಹಾಗೂ ಚುಟುಕು ಚಟಾಕಿ ಎಂಬ ಕವನ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದರು. ಸೃಜನಶೀಲರಾದ ಇವರು ಕೂತಲ್ಲೆ ಚುಟುಕು ರಚಿಸ ಬಲ್ಲವರಾಗಿದ್ದರು. ವಿಭಿನ್ನ, ವಿಶಿಷ್ಟ, ವಿನೂತನವಾದ ಹನಿ-ಮಿನಿ, ಚುಟುಕುಗಳನ್ನು ಹೆಣೆಯುತ್ತಿದ್ದರು.

    300x250 AD

    ಇವರಿಗೆ ಇದ್ದ ಅನಾರೋಗ್ಯದ ಚಿಂತೆ ಬಿಟ್ಟು ಲವಲವಿಕೆಯಿಂದ ಸಾವಿರಾರು ಚುಟುಕು ಹನಿಗವನವನ್ನು ರಚಿಸುತ್ತಿದ್ದರು ಹಾಗೂ ಓದಿ ಸಂತಸದಿಂದ ಆಸ್ವಾದಿಸುತ್ತಿದ್ದರು. ಓಣಿಕೇರೆ ವೆಂಕಟೇಶ ಹೆಗಡೆ ಸೇರಿದಂತೆ ಮೃತರು ಇಬ್ಬರು ಗಂಡು ಮಕ್ಕಳು, ಪತ್ನಿ, ಅಪಾರ ಬಂಧು ಬಳಗ‌ ಅಗಲಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top