• first
  second
  third
  previous arrow
  next arrow
 • ಶಾಲಾಭಿವೃದ್ಧಿಗಾಗಿ ಗೌರವಧನ ದೇಣಿಗೆ ನೀಡಿದ ಗ್ರಾ.ಪಂ ಸದಸ್ಯ

  300x250 AD

  ಕಾರವಾರ : ಕೊರ್ಲಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 12 ಸಾವಿರ ಮೊತ್ತದ ಚೆಕ್‌ನ್ನು ಶಾಲೆಗೆ ಹಸ್ತಾಂತರಿಸುವ ಮೂಲಕ ಹಲಗದ್ದೆ ಗ್ರಾ. ಪಂ ಸದಸ್ಯ ಅರವಿಂದ ತೇಲಗುಂದ ಅವರು ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

  ವರ್ಷಕ್ಕೆ ಪಂಚಾಯತರಾಜ್ ಇಲಾಖೆ ನೀಡುವ ಗೌರವಧನವನ್ನು ಶಾಲಾ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳಿಗೆ ಊಟಕ್ಕೆ ಅಗತ್ಯ ಬೇಳೆಕಾಳುಗಳನ್ನು ವಿತರಿಸಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಹಂಬಲವಿದೆ. ಈ ಕಾರಣಕ್ಕೆ ಕೈಲಾದಷ್ಟು ಸಹಾಯವನ್ನು ಶಾಲೆಗೆ ಮಾಡಲಿದ್ದೇನೆ ಎಂದರು.

  300x250 AD

  ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಭೋವಿವಡ್ಡರ, ಮುಖ್ಯ ಶಿಕ್ಷಕ ದಶರಥ ವಾಗ್ದರೆ, ಶೇಖರ ಕಬ್ಬೇರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಐ. ಜಿ. ಚೆನ್ನಯ್ಯ, ಸುರೇಶ ಕಣ್ಣೀರ ಸೇರಿದಂತೆ ಇನ್ನಿತರರು ಇದ್ದರು.

  Share This
  300x250 AD
  300x250 AD
  300x250 AD
  Back to top