ಕಾರವಾರ : ತಾಲೂಕಿನ ಮಾಲ್ದಾರವಾಡಾದ ಜನರಲ್ಲಿ ಕೊರೋನಾ ಲಸಿಕೆಯಲ್ಲಿ ಸಂಶಯವಿರಿವ ಕಾರಣ ಲಸಿಕೆ ಪಡೆಯದೇ ಉಳಿದಿದ್ದು ಬೆಳಕಿಗೆ ಬಂದಿದ್ದು, ಜನರಲ್ಲಿ ಲಸಿಕೆ ಬಗ್ಗೆ ಸಂಶಯವನ್ನು ದೂರ ಮಾಡಿ ಮನೆಯಲ್ಲೇ ಲಸಿಕೆ ನೀಡುವ ಕ್ರಮವನ್ನು ಕಾರವಾರ ಎಸಿ ವಿದ್ಯಾಶ್ರೀ ಚಂದರಗಿ ಅವರು ಇಂದು ಕೈಕೊಂಡಿದ್ದಾರೆ.
ಕಾರವಾರದ ಪ್ರಾಥಮಿಕ ಕೇಂದ್ರ, ಉಪ ಕೇಂದ್ರ, ಕಿಮ್ಸ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೊರೊನಾ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಆದರೆ ಲಸಿಕೆ ಮೇಲೆ ಸಂಶಯ ವ್ಯಕ್ತಪಡಿಸಿ ತಾಲೂಕಿನ ಮಾಲ್ದದಾರವಾಡಾದಲ್ಲಿ ಅನೇಕರು ಲಸಿಕೆ ಪಡೆದಿರಲಿಲ್ಲ. ಈ ಕಾರಣದಿಂದ ಎಸಿ ಸ್ಥಳಕ್ಕೆ ತೆರಳಿ ಸಂಶಯ ದೂರ ಮಾಡಿ, ಲಸಿಕೆ ಪಡೆಯಲು ಮನವೊಲಿಸಿದರು. ತಹಸೀಲ್ದಾರ್ ಎನ್. ಎಫ್. ನರೋನಾ ಜೊತೆಗಿದ್ದರು.