ಸಿದ್ದಾಪುರ: ತಾಲೂಕಿನ ಕಾನಸೂರ ಶ್ರೀ ಕಾಳಿಕಾ ಭವಾನಿ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿ ವರ್ಷಿತಾ ಸುರೇಶ ಗೌಡ ಎಂಬಾಕೆ ಮೆದುಳು ಗಡ್ಡೆ (ಬ್ರೇನ್ ಟ್ಯೂಮರ್)ಗೆ ತುತ್ತಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ಸೂಚಿಸಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಸಾಕಷ್ಡು ಹಣ ತಗುಲಲಿದ್ದು, ಸಾರ್ವಜನಿಕರಿಂದ ನೆರವು ಕೇಳಲಾಗಿದೆ. ಹೊತ್ತಿನ ಊಟಕ್ಕೆ ದಿನವಿಡಿ ದುಡಿಯುವ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಭರಿಸುವುದು ಕಷ್ಟವಾಗಿದ್ದು, ಆಸಕ್ತ ದಾನಿಗಳು ಧನ ಸಹಾಯ ಮಾಡಬಹುದಾಗಿದೆ.
ಖಾತೆದಾರರ ಹೆಸರು: ಸುರೇಶ್ ನಾರಾಯಣ ಗೌಡ, ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಇಂಡಿಯಾ, ಅಕೌಂಟ್ ನಂಬರ್: 846910110000875, ಐಎಫ್ಎಸ್ಸಿ ಕೋಡ್: BKID0008469. ಹೆಚ್ಚಿನ ಮಾಹಿತಿಗಾಗಿ ಜಯಂತ – 8277319243 ಸಂಪರ್ಕಿಸಬಹುದಾಗಿದೆ.